News Kannada
Friday, December 02 2022

ಕರ್ನಾಟಕ

ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೇಬಲ್ ಅನುಮಾನಾಸ್ಪದ ಸಾವು

Photo Credit :

ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೇಬಲ್ ಅನುಮಾನಾಸ್ಪದ ಸಾವು

ಬಾಗಲಕೋಟೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನಿವಾಸದ ಭಧ್ರತೆಗೆ ನಿಯೋಜಿಸಲಾಗಿದ್ದ ಕಾನ್ ಸ್ಟೇಬಲ್ ಒಬ್ಬರು ಅನುಮಾನಾಸ್ಪದಾಗಿ ಸಾವನ್ನಪ್ಪಿದ್ದಾರೆ.

ಮಂಜುನಾಥ್ ಹರಿಜನ(30) ಎಂಬವರೇ ಮೃತಪಟ್ಟವರು. ಇವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೇಬಲ್ ಆಗಿದ್ದರು. ಇಂದು ಬೆಳಗ್ಗೆ ಎಸ್ ಪಿ ನಿವಾಸದ ಆವರಣದ ಗೇಟ್ ಮುಂದೆ ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಶವ ಪತ್ತೆಯಾಗಿದೆ. ಶವದ ಬದಿಯಲ್ಲಿ ಎರಡು ಜೀವಂತ ಗುಂಡು ಹಾಗೂ ರೈಫಲ್ ಬಿದ್ದಿದೆ.

ಕೊಪ್ಪಳ ಸಮೀಪದ ಮೆಟಲಗುಡ್ಡದವರಾದ ಮಂಜುನಾಥ್ ಅವರದ್ದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂದು ತನಿಖೆಯಿಂದ ತಿಳಿದುಬರಬೇಕಾಗಿದೆ.

See also  ವಯನಾಡಿಗೆ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ: ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು