News Kannada
Wednesday, October 05 2022

ಕರ್ನಾಟಕ

ರೈಲಿನಡಿ ಬಿದ್ದು ಮೃತಪಟ್ಟ ಯೋಧನ ಶವ ಹುಟ್ಟೂರಿಗೆ: ಜಿಲ್ಲಾಡಳಿತ ನಿರ್ಲಕ್ಷ್ಯ - 1 min read

Photo Credit :

ರೈಲಿನಡಿ ಬಿದ್ದು ಮೃತಪಟ್ಟ ಯೋಧನ ಶವ ಹುಟ್ಟೂರಿಗೆ: ಜಿಲ್ಲಾಡಳಿತ ನಿರ್ಲಕ್ಷ್ಯ

ಕಾರವಾರ: ಮನೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ರೈಲ್ವೆಯಿಂದ ಆಕಸ್ಮಿಕವಾಗಿ ಬಿದ್ದು ಕಾರವಾರ ಮೂಲದ ಯೋಧ ದುಮ್ಮಿಂಗ್ ಸಿದ್ದಿ ಮಥುರಾದಲ್ಲಿ ಮೃತಪಟ್ಟಿದ್ದು ಬುಧವಾರ ಪಾರ್ಥಿವ ಶರೀರ ಕಾರವಾರಕ್ಕೆ ಆಗಮಿಸಿದೆ.

ಮಥುರಾದ ಸೇನಾ ಆಸ್ಪತ್ರೆಯಿಂದ ಆಗಮಿಸಿದ್ದ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ 4ಕ್ಕೆ ಕಾರವಾರಕ್ಕೆ ಆಗಮಿಸಿದ್ದು ಒಬ್ಬ ಸೇನಾಧಿಕಾರಿಯು ತಹಸೀಲ್ದಾರರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದರು.

ಬಳಿಕ ಪಾರ್ಥಿವ ಶರೀರವನ್ನು ಮನೆಯ ಒಳ ಭಾಗದಲ್ಲಿ ಇಡಲಾಗಿದ್ದು ಕುಟುಂಬಸ್ಥರು, ಸಂಬಂಧಿಕರು ಸಾರ್ವಜನಿಕರು ದರ್ಶನ ಪಡೆದುಕೊಂಡರು. ಮಧ್ಯಾಹ್ನದ ವೇಳೆಗೆ ಮೆರವಣಿಗೆ ನಡೆಸಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯಿತು.

ಪಂಜಾಬ್‌ನ ಪಾಕಿಸ್ತಾನ ಗಡಿಭಾಗವಾದ ಪಠಾಣ್‌ಕೋಟ್‌ನಲ್ಲಿ ಬಿಎಸ್‌ಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದ ದುಮ್ಮಿಂಗ್ ಸಿದ್ಧಿ ಅವರು ಕಾರವಾರಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ದಿಲ್ಲಿಯಲ್ಲಿ ರೈಲ್ವೆ ಏರಿದ್ದರು. ಆದರೆ ಉತ್ತರ ಪ್ರದೇಶದ ಮಥುರಾದಲ್ಲಿ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃಪಟ್ಟಿದ್ದಾರೆ. ದುಮ್ಮಿಂಗ್ ಸಿದ್ದಿ ಅವರು ತನ್ನ ಮಗನ ಹುಟ್ಟುಹಬ್ಬದ (ಡಿ.9)ಆಚರಣೆಯ ದಿನವೇ ಮನೆಯವರಿಗೆಲ್ಲ ಸರ್ಪ್ರೈಸ್ ನೀಡುತ್ತೇನೆ ಹಾಗೂ ಕ್ರಿಸ್ಮಸ್ ಹಬ್ಬದ ದಿನ ಹೊಸ ಮನೆಯನ್ನು ಪ್ರವೇಶ ಮಾಡುವ ಕನಸು ಹೊಂದಿದ್ದರು. ಯೋಧನ ಹಠಾತ್ ಸಾವಿಗೀಡಾಗಿದ್ದು ಕುಟುಂಬ ಸದಸ್ಯರಿಗೆ ಸಿಡಿಲು ಬಡಿದಂತಾಗಿದೆ.

ಕಾರವಾರ ತಾಲೂಕಿನ ಶಿರವಾಡ ಗ್ರಾ.ಪಂ. ವ್ಯಾಪ್ತಿಯ ಮಖೇರಿ ಗ್ರಾಮದ ನಿವಾಸಿ ದುಮ್ಮಿಂಗ್ ಸಿದ್ದಿ ಶನಿವಾರ ತನ್ನ ಪತ್ನಿಗೆ ಕರೆ ಮಾಡಿ ತಾನು ರಜೆಯ ಮೇಲೆ ಊರಿಗೆ ಬರುತ್ತಿದ್ದು ಸೋಮವಾರ ರೈಲನ್ನೇರಿ ಬುಧವಾರ ತಲುಪುತ್ತೇನೆ ಎಂದಿದ್ದರು. ಪತಿಯ ಮರಣದ ಸುದ್ದಿ ತಿಳಿದ ಪತ್ನಿ ಲೀನಾ ಸಿದ್ಧಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ದುಮ್ಮಿಂಗ್ ಸಿದ್ಧಿ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಕರ್ತವ್ಯದಲ್ಲಿದ್ದು ಇನ್ನು ಒಂದು ವರ್ಷದಲ್ಲಿ ನಿವೃತ್ತಿಯಾಗುವುದಿತ್ತು. ಹೀಗಾಗಿ ತಮ್ಮ ಗ್ರಾಮದಲ್ಲಿ ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದರು. ಕರ್ತವ್ಯದ ನಂತರ ಬಿಡುವಾದಾಗ ಪ್ರತಿದಿನವೂ ಮನೆಗೆ ವಿಡಿಯೋ ಕರೆ ಮಾಡಿ ತನ್ನ ಕುಟುಂಬದವರೊಂದಿಗೆ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆಕ್ಷೇಪ: ರೈಲ್ವೆಯಿಂದ ಬಿದ್ದು ಮೃತಪಟ್ಟಿದ್ದ ದುಮ್ಮಿಂಗ್ ಸಿದ್ಧಿ ಅವರು ಪಾರ್ಥವ ಶರೀರ ಕಾರವಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಯೋಧನಿಗೆ ಜಿಲ್ಲಾಡಳಿತದಿಂದ ಗೌರವ ಸೂಚಿಸಿಲ್ಲ ಎನ್ನುವ ಬಗ್ಗೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶಕ್ಕಾಗಿ ತನ್ನ ಕರ್ತವ್ಯ ಸಲ್ಲಿಸಿದ ಯೋಧನಿಗೆ ಕಿಂಚಿತ್ತು ಗೌರವ ಜಿಲ್ಲಾಡಳಿತ ಸಲ್ಲಿಸದೆ ಇರುವುದು ಸರಿಯಲ್ಲ ಎನ್ನುವುದು ಜನರ ಅಭಿಪ್ರಾಯವಾಗಿತ್ತು.

See also  ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಐವರಲ್ಲಿ ಕೊರೊನಾ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು