News Kannada
Wednesday, October 05 2022

ಕರ್ನಾಟಕ

ಗಮನ ಸೆಳೆಯುತ್ತಿರುವ ಕರಾವಳಿ ಫಲ-ಪುಷ್ಪ ಪ್ರದರ್ಶನ - 1 min read

Photo Credit :

ಗಮನ ಸೆಳೆಯುತ್ತಿರುವ ಕರಾವಳಿ ಫಲ-ಪುಷ್ಪ ಪ್ರದರ್ಶನ

ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಇಲ್ಲಿನ ಕಡಲ ತೀರದ ಯುದ್ಧ ನೌಕ ಉದ್ಯಾನವನದಲ್ಲಿ ಆಯೋಜಿಸಲಾಗಿರುವ ಫಲ-ಪುಷ್ಪ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿದೆ.

ಹೂವಿನ ಹಾವು, ಗರ್ಜಿಸುತ್ತಿರುವ ಸಿಂಹ, ಜೆಲ್ಲಿ ಫಿಷ್, ಅಕ್ಟೋಪಸ್, ಮೀನು ಮತ್ತು ಇತರೇ ಪ್ರಾಣಿ ಪಕ್ಷಿಗಳು ಏಕಕಾಲದಲ್ಲಿ ಪ್ರತ್ಯಕ್ಷವಾಗಿದೆ. ಕರಾವಳಿ ಉತ್ಸವದ ಫಲ-ಪುಷ್ಪ ಪ್ರದರ್ಶನದಲ್ಲಿ ನಗರದ ರವೀಂದ್ರನಾಥ ಕಡಲ ತೀರದಲ್ಲಿರುವ ವಾರ್ ಶಿಪ್ ಉದ್ಯಾವನದಲ್ಲಿ ಜಿಲ್ಲಾಡಳಿತ ಮತ್ತು ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.

ಗುಲಾಬಿ, ಸೇವಂತಿ, ಕಾರ್ನೆಶನ್ ಹೂವು ಮತ್ತು ಅಸ್ಪಾರಗಸ್ ಹುಲ್ಲು ಹಾಗೂ ಕಲ್ಲಂಗಡಿ ಹಣ್ಣು, ಬಗೆ ಬಗೆಯ ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ಮಾಡಲಾಗಿದೆ. ಪ್ರದರ್ಶನದಲ್ಲಿ ಸೇವಂತಿ, ಗುಲಾಬಿ ಮತ್ತು ವಿವಿಧ ತರಹದ ಹೂವುಗಳಿಂದ ಮಾಡಿರುವ ಯಕ್ಷಗಾನ ಕಿರೀಟ, ಡೋಲು, ಬೇಬಿ ಡಾಲ್, ರೇಸಿಂಗ್ ಕಾರು,ನಾಜೂಕಾದ ಗೋದಿ ಕಡ್ಡಿಯಿಂದ ತಯಾರಿಸಿರುವ ಲಂಡನ್ ಬ್ರಿಜ್, ಪೀಸಾ ಟಾವರ್, ಕಲ್ಲಂಗಡಿಯಲ್ಲಿ ಮೂಡಿ ಬಂದಿರುವ ಜ್ಞಾನಪೀಠ ಪುರಸ್ಕೃತರಾದ ರಾಜ್ಯದ ಹೆಸರಾಂತ ಸಾಹಿತಿಗಳ ಕಲಾಕೃತಿಗಳು, ಕುಂಬಳಕಾಯಿ ಮತ್ತು ಸೌತೆಕಾಯಿಗಳಿಂದ ತಯಾರಿಸಿದ ಸಂಗೀತಗಾರರ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಇವುಗಳೊಂದಿಗೆ ರಾಗಿ ಸಜ್ಜೆ, ನವಣೆಯಂತಹ ಸಿರಿಧಾನ್ಯಗಳಿಂದ ನಿರ್ಮಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರರ್ದಾರ್ ವಲ್ಲಬಾಯಿ ಪಟೇಲ್ ಅವರ ಮೂರ್ತಿಗಳು ಎದ್ದು ಬರುವಂತಿವೆ. ಬೃಹತಾಕಾರದ ಹೂವಿನ ರಂಗೋಲಿ ಚಿತ್ತಾರ ಕೇಂದ್ರ ಬಿಂದುವಾಗಿದೆ. ನಾರಿಕೆಳದ ಕೆತ್ತನೆಗಳು, ಬೋನ್ಸಾಯ್ ಗಿಡ ಮರಗಳು, ಹಸಿ ಶುಂಠಿ, ಸಿಟ್ರೋನೆಲ್ಲಾ, ಲಿಂಬೆ ಮತ್ತು ಏಲಕ್ಕಿಯಿಂದ ತಯಾರಿಸಿದ ಸುಗಂದ ದ್ರವ್ಯಗಳು ಮತ್ತು ಜಿಲ್ಲೆಯ ಪ್ರಮುಖ ಬೆಳೆಗಳಾದ ಬಾಳೆ, ಅಡಕೆ, ಕೋಕಮ್, ಗಜನಿಂಬೆ ಮತ್ತು ಇತರ ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

See also  ಸಿಎಎ ಕಾಯ್ದೆಯಿಂದ ಕೊಡವರ ಅಸ್ತಿತ್ವಕ್ಕೆ ದಕ್ಕೆ : ಸಿಎನ್ ಸಿ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು