News Kannada
Saturday, October 01 2022

ಕರ್ನಾಟಕ

ಕರಾವಳಿ ಉತ್ಸವದಲ್ಲಿ ಮತ್ಸ್ಯಲೋಕ ಅನಾವರಣ - 1 min read

Photo Credit :

ಕರಾವಳಿ ಉತ್ಸವದಲ್ಲಿ ಮತ್ಸ್ಯಲೋಕ ಅನಾವರಣ

ಕಾರವಾರ: ಕರಾವಳಿ ಉತ್ಸವದಲ್ಲಿ ಆಯೋಜಿಸಲಾಗಿರುವ ಮತ್ಯ್ಸ ಮೇಳ ಜನಾಕರ್ಷಣೆಗೆ ಪಾತ್ರವಾಗಿದೆ. ಅಕ್ವೇರಿಯಂಗಳಲ್ಲಿ ಸುಮಾರು ೮೦ಕ್ಕೂ ಹೆಚ್ಚಿನ ಪ್ರಜಾತಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಅಕ್ವೇರಿಯಂ ಮೀನಿನ ತಳಿಗಳಾದ ಒರಾಂಡಾ ಗೋಲ್ಡ್, ರೆಡ್ ಪ್ಯಾರಟ್, ಪಾಕು, ಸೀ ಆಂಜಲ್, ಪ್ಲ್ಯಾಕ್ ಲೀಫ್, ಅಲ್ಬಿನೊ ಓಸ್ಕರ್, ಚಿಚಿಡ್ಸ್, ಟೈಗರ್ ಓಸ್ಕರ್, ಸ್ಪಾಟೆಡ್ ಈಲ್, ಸಿಲ್ವರ್ ಮತ್ತು ಬ್ಲ್ಯಾಕ್ ಆಂಜೆಲ್, ರೇಂಬೋ ಶಾರ್ಕ್, ಗ್ರೀನ್ ಟೆರರ್ ಸೇರಿದಂತೆ ವಿವಿಧ ಪ್ರಜಾತಿಯ ಮೀನುಗಳ ತಂದಿಡಲಾಗಿದೆ.

ಪ್ರಪ್ರಥಮ ಬಾರಿಗೆ ಕರಾವಳಿ ಉತ್ಸವದಲ್ಲಿ ಮತ್ಸ್ಯಲೋಕ ಅನಾವರಣಗೊಂಡಿದ್ದು ಮತ್ಸ್ಯಪ್ರಿಯರಿಗೆ ಈ ಬಾರಿಯ ಉತ್ಸವ ಇನ್ನಷ್ಟು ಹುಮ್ಮಸ್ಸುಗೊಳಿಸಿದೆ. ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಪ್ರಮುಖ ಕಸುಬಾಗಿರುವದರಿಂದ ಮೀನುಗಾರಿಕೆ ಇಲಾಖೆಯು ಪ್ರವಾಸಿಗರಿಗೆ ಮತ್ಸ್ಯಲೋಕವನ್ನು ಪ್ರದರ್ಶಿಸಬೇಕೆಂಬ ಉದ್ದೇಶದಿಂದ ಕಾರವಾರ ಕಡಲತೀರದ ಯುದ್ಧ-ನೌಕೆ ಆವರಣದಲ್ಲಿ ಮತ್ಸ್ಯ ಮೇಳವನ್ನು ಆಯೋಜಿಸಿದ್ದು ಮೇಳದಲ್ಲಿ ೬೦ಕ್ಕೂ ಹೆಚ್ಚು ಅಕ್ವೇರಿಯಮ್ ಮತ್ತು ೮೦ಕ್ಕೂ ಹೆಚ್ಚಿನ ತಳಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮೇಳದಲ್ಲಿ ಸ್ಟಾಕೋಪೆಟ್ಸಟನಲ್ ಅಕ್ವೇರಿಯಮ್ ಮಾದರಿ, ತೆಲುವ ಕಲ್ಲುಗಳ, ಪ್ಲಾಂಟೇಡ್, ಪ್ಲೇನ್ ಮತ್ತು ಟ್ರೋಪಿಕಲ್ ಅಕ್ವೇರಿಯಮ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ರೈತರಿಗೆ ಮೀನು, ಸಿಗಡಿ ಕೃಷಿ ಬಗ್ಗೆ ಒಲವು ತೋರುವಂತೆ ಮಾಡಲು ಮೀನುಗಾರಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಲಾಗಿದೆ. ಅಲ್ಲದೇ ಮಕ್ಕಳು ಕೂಡಾ ಮೀನು ತಳಿಗಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಪಿಕ್‌ಎಂಡ್ ಸ್ಪೀಕ್ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಗುತ್ತಿದೆ.

See also  ಕೇರಳದಲ್ಲಿ ನಿಫಾ ವೈರಸ್– ರಾಜ್ಯದಲ್ಲಿ ಬಿಗಿ ಕ್ರಮ: ಮುಖ್ಯಮಂತ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು