News Kannada
Friday, October 07 2022

ಕರ್ನಾಟಕ

ಡಾ. ದಿಲೀಪ್ ಹತ್ಯೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಮ ಕ್ರಮಕ್ಕೆ ಡಿಸಿಗೆ ಮನವಿ - 1 min read

Photo Credit :

ಡಾ. ದಿಲೀಪ್ ಹತ್ಯೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಮ ಕ್ರಮಕ್ಕೆ ಡಿಸಿಗೆ ಮನವಿ

ಮಡಿಕೇರಿ: ಕುಶಾಲನಗರದಲ್ಲಿ ಖಾಸಗಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ದಿಲೀಪ್ ಕುಮಾರ್ ಅವರ ಹತ್ಯೆಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಮಂಡಳಿಯ  ಕೊಡಗು ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ಕುಶಾಲನಗರದ ವೈದ್ಯ ಡಾ.ದಿಲೀಪ್ ಹತ್ಯೆ ಪ್ರಕರಣ ವೈದ್ಯಕೀಯ ಸಮುದಾಯದಲ್ಲಿ ಭಯಕ್ಕೆ ಕಾರಣವಾಗಿದೆ.  ಕೊಡಗು ಜಿಲ್ಲಾ ವೈದ್ಯಕೀಯ ಸಂಸ್ಥೆಯ ಸದಸ್ಯರಾಗಿದ್ದ ಡಾ.ದಿಲೀಪ್ ಜನಪ್ರಿಯ ವೈದ್ಯರಾಗಿದ್ದು ಇವರ ಹತ್ಯೆ ವೈದ್ಯರಲ್ಲಿ ದಿಗ್ಬಮೆಗೆ ಕಾರಣವಾಗಿದೆ. ಡಾ.ದಿಲೀಪ್ ಹತ್ಯೆಯನ್ನು ತೀವ್ರವಾಗಿ ಖಂಡಿಸುವುದಲ್ಲದೇ,  ಹತ್ಯೆಯ ಆರೋಪಿಗಳನ್ನು ವಿಳಂಭರಹಿತವಾಗಿ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕ್ಕೆ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು  ಭಾರತೀಯ ವೈದ್ಯಕೀಯ ಮಂಡಳಿಯ ಕೊಡಗು ಘಟಕದ ಅಧ್ಯಕ್ಷರಾದ ಡಾ. ಎನ್.ಎಸ್.  ನವೀನ್  , ಗೌರವ ಕಾಯ9ದಶಿ9 ಡಾ. ಸಿ.ಆರ್.ಪ್ರಶಾಂತ್ ಒತ್ತಾಯಿಸಿದರು. 

ಜಿಲ್ಲಾಧಿಕಾರಿಯನ್ನು ಭೇಟಿಯಾದ  ವೈದ್ಯರ ನಿಯೋಗದಲ್ಲಿ  ಭಾರತೀಯ ವೈದ್ಯಕೀಯ ಸಂಸ್ಥೆಯ ಕೊಡಗು ಘಟಕದ ಪ್ರಮುಖರಾದ ಡಾ.ಮೋಹನ್ ಅಪ್ಪಾಜಿ, ಡಾ.ಕಸ್ತೂರಿ, ಡಾ.ರಾಜೇಶ್ವರಿ, ಡಾ.ಜನಾಧ9ನ್, ಡಾ.ಕರುಂಬಯ್ಯ, ಡಾ.ದೇವಯ್ಯ,  ಡಾ.ಅಭಿನಂದನ್, ಡಾ.ಶಶಾಂಕ್, ಡಾ.ಮಲ್ಲಿಕಾಜು9ನ್  ಇದ್ದರು.

See also  `ಕನ್ನಡ ಗ್ರಾಮೀಣ ಸೊಡಗಿನ ಭಾಷೆ, ಹೆಮ್ಮೆಯಿಂದ ಸ್ವೀಕರಿಸಿ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು