News Kannada
Wednesday, October 05 2022

ಕರ್ನಾಟಕ

ಕಾಸರಗೋಡು: ಹಿಂದೂ ಸಮಾಜೋತ್ಸವ ಬಳಿಕ ಭಗಿಲೆದ್ದ ಹಿಂಸಾಚಾರ - 1 min read

Photo Credit :

ಕಾಸರಗೋಡು: ಹಿಂದೂ ಸಮಾಜೋತ್ಸವ ಬಳಿಕ ಭಗಿಲೆದ್ದ ಹಿಂಸಾಚಾರ

ಕಾಸರಗೋಡು:  ಕಾಸರಗೋಡಿನಲ್ಲಿ ನಿನ್ನೆ ನಡೆದ ಹಿಂದೂ ಸಮಾಜೋತ್ಸವ  ಮುಗಿಸಿ ತೆರಳುತ್ತಿದ್ದ  ಸಂದರ್ಭದಲ್ಲಿ  ಕಾಸರಗೋಡು ನಗರ ಹಾಗೂ ಇತರ ಕಡೆಗಳಲ್ಲಿ ಹಿಂಸಾತ್ಮಕ ಘಟನೆ ನಡೆದಿದ್ದು , ಕಲ್ಲೆಸೆತ  ಹಾಗೂ ಲಾಠಿಚಾರ್ಜ್  ನಿಂದ  ಹಲವು ಮಂದಿ ಗಾಯಗೊಂಡಿದ್ದಾರೆ.  ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ , ಉಳಿಯತ್ತಡ್ಕ , ಎಸ್ . ಪಿ  ನಗರ ಮೊದಲಾದೆಡೆ  ಕಲ್ಲೆಸೆತ  ನಡೆದಿದೆ. 

ಉಳಿಯತ್ತಡ್ಕದಲ್ಲಿ   ವ್ಯಾಪಾರ ಮಳಿಗೆ  ಹಾಗೂ ವಾಹನಗಳ ಮೇಲೆ ಕಲ್ಲೆಸೆತ ನಡೆದಿದ್ದು , ಪೊಲೀಸರು  ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು  ಮುಚ್ಚಿಸಿದ್ದು , ದೌರ್ಜನ್ಯ  ನಡೆಸಿರುವುದಾಗಿ  ವರ್ತಕರು ದೂರಿದ್ದಾರೆ . 

ಕೃತ್ಯವನ್ನು ಖಂಡಿಸಿ ಉಳಿಯತ್ತಡ್ಕ ಪೇಟೆಯಲ್ಲಿ  ಇಂದು ಬೆಳಿಗ್ಗೆ ಆರರಿಂದ   ಮಧ್ಯಾಹ್ನ ಒಂದರ ತನಕ  ಅಂಗಡಿ ಮುಂಗಟ್ಟುಗಳನ್ನು  ಮುಚ್ಚಿ  ಪ್ರತಿಭಟನೆ ನಡೆಸಲಾಗುತ್ತಿದೆ . 

ಕಾಸರಗೋಡಿನ  ಇತರ ಕಡೆಗಳಲ್ಲೂ ಕಲ್ಲೆಸೆತ ಘಟನೆ ನಡೆದಿದೆ .  ನಗರದ ಪ್ರೆಸ್ ಕ್ಲಬ್ ಜಂಕ್ಷನ್ ನಲ್ಲಿ  ಕಾರಿಗೆ ಕಲ್ಲೆಸೆದ ಪರಿಣಾಮ  ರಂಜಿತ್ ಎಂಬವರು  ಗಾಯಗೊಂಡಿದ್ದಾರೆ.    ಕಾಸರಗೋಡು  ಜಿಲ್ಲೆಯ ಇತರ  ಕಡೆಗಳಲ್ಲೂ   ಅಹಿತಕರ ಘಟನೆ ನಡೆದಿದೆ . 

 ಅಹಿತಕರ ಘಟನೆ ಹಿನ್ನಲೆಯಲ್ಲಿ  ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 

ಉಳಿಯತ್ತಡ್ಕದಲ್ಲಿ  ನಡೆದ  ಘಟನೆಯನ್ನು ಖಂಡಿಸಿ  ವರ್ತಕರ ಸಂಘ ಇಂದು ಉಳಿಯತ್ತಡ್ಕದಲ್ಲಿ  ಪ್ರತಿಭಟನಾ ಸಭೆ ಮತ್ತು ಮೆರೆವಣಿಗೆ ನಡೆಸಲು  ತೀರ್ಮಾನಿಸಿದೆ . 

 

See also  ಗಲ್ಫ್ ನಿಂದ ಕಳುಹಿಸಿದ್ದ ಚಿನ್ನಾಭರಣ ಮಾರಾಟ: ಓರ್ವನ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು