News Kannada
Saturday, October 01 2022

ಕರ್ನಾಟಕ

ಸಾಂಗವಾಗಿ ನೆರವೇರಿದ ಪೈವಳಿಕೆ ಜೋಡುಕೆರೆ ಕಂಬಳ - 1 min read

Photo Credit :

ಸಾಂಗವಾಗಿ ನೆರವೇರಿದ ಪೈವಳಿಕೆ ಜೋಡುಕೆರೆ ಕಂಬಳ

ಕಾಸರಗೋಡು: ಆತಂಕ, ಗೊಂದಲದ ನಡುವೆ ಪೈವಳಿಕೆ ಬೋಳಂಗಳದಲ್ಲಿ ಪ್ರಥಮ ಅಣ್ಣ – ತಮ್ಮ  ಜೋಡುಕರೆ ಕಂಬಳ  ಸಾಂಗವಾಗಿ ನೆರವೇರಿತು. ಶನಿವಾರ ಬೆಳಿಗ್ಗೆ  ೧೧ ಗಂಟೆಗೆ ಆರಂಭವಾದ ಕಂಬಳ ಆದಿತ್ಯವಾರ  ಬೆಳಿಗ್ಗೆ ೯ ಗಂಟೆಗೆ ಕೊನೆಗೊಂಡಿತು. 

ಕಂಬಳಕ್ಕೆ   ಅನುಮತಿ  ನೀಡದಂತೆ   ಪ್ರಾಣಿ ದಯಾ ಸಂಘ  ಪೇಟಾ  ಒತ್ತಡದ  ನಡುವೆ ಕೊನೆ ಕ್ಷಣದ ತನಕ  ಅತಂತ್ರವಾಗಿದ್ದ  ಅಣ್ಣ- ತಮ್ಮ ಜೋಡುಕರೆ ಕಂಬಳ  ಬೆತ್ತ  ರಹಿತವಾಗಿ  ನಡೆಯಿತು .

ಕಂಬಳದಲ್ಲಿ  ಕೋಣಗಳಿಗೆ  ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿ ಪೇಟಾ ಸಂಘಟನೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಮೂಲಕ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಕರಿನೆರಳು ಬೀರಿತ್ತು.ಆದರೆ ಬೆತ್ತ  ರಹಿತವಾಗಿ ಕೋಣಗಳಿಗೆ ಹಿಂಸೆ ನೀಡದೆ ಕಂಬಳ ನಡೆಸಲು  ಮೌಖಿಕವಾಗಿ ಕಂಬಳ ನಡೆಸಲು  ಅನುಮತಿ ನೀಡಿದರು.

ಹದಿಮೂರು ವರ್ಷಗಳ ಬಳಿಕ ಕಾಸರಗೋಡಿನಲ್ಲಿ  ಕಂಬಳ ನಡೆಯುತ್ತಿದ್ದು, ಕಂಬಳ ವೀಕ್ಷಣೆಗೆ  ಸಾವಿರಾರು ಮಂದಿ ತುದಿಗಾಲಲ್ಲಿ ನಿಂತಿದ್ದರು. ಆದರೆ  ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಮೂಲಕ ಯಶಸ್ವಿಯಾಗಿ ನಡೆಯಿತು .

ಕಾಸರಗೋಡು ಜಿಲ್ಲೆ ಅಲ್ಲದೆ ಕೇರಳ, ಕರ್ನಾಟಕ ಹಾಗೂ ಇತರೆಡೆಗಳಿಂದ ಸಾವಿರಾರು ಮಂದಿ ಕಂಬಕ್ಕೆ  ಸಾಕ್ಷಿಯಾದರು. ಕಂಬಳಕ್ಕೆ   ಪೈವಳಿಕೆ ಅರಮನೆಯ ರಂಗತ್ರೈ ಅರಸರು ಚಾಲನೆ ನೀಡಿದರು.

ಬ್ರಹ್ಮಶ್ರೀ  ವಾಸುದೇವ ನಲ್ಲೂರಾಯ ದೀಪ ಬೆಳಗಿಸಿದರು. ಒಡಿಯೂರು ಮಠದ ಶ್ರೀ  ಗುರುದೇವಾನಂದ ಸ್ವಾಮೀಜಿ  ದೀಪ ಬೆಳಗಿಸಿದರು.

ಕಾರ್ಯಕ್ರಮ ಕ್ಕೆ  ವಿವಿಧ  ಸಮುದಾಯ ದ  ಮುಖಂಡರು , ರಾಜಕೀಯ  ಪಕ್ಷ , ಸಂಘ ಸಂಸ್ಥೆಗಳ ಮುಖಂಡರು , ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು .

ಕಂಬಳದ  ಪೂರ್ವಭಾವಿಯಾಗಿ ಡಿ . ೧೩ ರಿಂದ  ೧೬ ತನಕ ಜಾನಪದ ಕ್ರೀಡೆ ಮತ್ತು ಗ್ರಾಮೀಣ ಕ್ರೀಡೆಯನ್ನು  ಆಯೋಜಿಸಲಾಗಿತ್ತು  

ಗ್ರಾಮೀಣ ಕ್ರೀಡೆಯನ್ನು ಉಳಿಸುವ – ಬೆಳೆಸುವ ನಿಟ್ಟಿನಲ್ಲಿ  ಅಣ್ಣ-ತಮ್ಮ  ಜೋಡುಕರೆ ಕಂಬಳ ಸಮಿತಿ ಮತ್ತು , ಶ್ರೀ ಕ್ಷೇತ್ರ  ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆ , ಕಾಸರಗೋಡು  ಇದರ ಸಹಯೋಗದಲ್ಲಿ  ಪೈವಳಿಕೆಯ ಬೋಳಂಗಳದಲ್ಲಿ  ಆಯಯೋಜಿಸಲಾಗಿದ್ದ  ಚೊಚ್ಚಲ ಅಣ್ಣ – ತಮ್ಮ ಜೋಡುಕರೆ ಕಂಬಳ ಗಮನಸೆಳೆಯುವಂತೆ ಮಾಡಿತು.

See also  ಐ. ಎಸ್. ಪ್ರಸಾದ್ ಅವರಿಗೆ ತುಮಕೂರು ವಿವಿ ಗೌರವ ಡಾಕ್ಟರೇಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು