News Kannada
Saturday, September 24 2022

ಕರ್ನಾಟಕ

ಕಟ್ಟಡವೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಶವ: ಜತೆಗಿದ್ದ ಪುರುಷ ನಾಪತ್ತೆ - 1 min read

Photo Credit :

ಕಟ್ಟಡವೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಶವ: ಜತೆಗಿದ್ದ ಪುರುಷ ನಾಪತ್ತೆ

ಕಾಸರಗೋಡು:  ನಗರ ಹೊರವಲಯದ  ವಿದ್ಯಾನಗರ ಚಾಲದಲ್ಲಿರುವ ವಸತಿಗೃಹವೊಂದರಲ್ಲಿ  ಕರ್ನಾಟಕ   ಮೂಲದ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 

ಈಕೆಯ  ಜೊತೆಗಿದ್ದ  ಚಂದ್ರ (೩೫)  ಎಂಬಾತ   ನಾಪತ್ತೆಯಾಗಿದ್ದಾನೆ . ಹುಬ್ಬಳ್ಳಿಯ  ಸರಸು  (೩೦)ಮೃತಪಟ್ಟ  ಮಹಿಳೆ. 

ಪರಾರಿಯಾಗಿರುವ ಚಂದ್ರ  ಕಾಸರಗೋಡಿನಲ್ಲಿ ಇಂಟರ್ ಲಾಕ್   ಹಾಸುವ ಕೆಲಸ ಮಾಡುತ್ತಿದ್ದನು. 

ಕೆಲ ವರ್ಷಗಳಿಂದ ವಿದ್ಯಾನಗರ ಚಾಲದಲ್ಲಿರುವ ವಸತಿಗೃಹದಲ್ಲಿ ಇಬ್ಬರು ವಾಸವಾಗಿದ್ದರು. ಮಂಗಳವಾರದಂದು  ಊರಿಗೆ ತೆರಳುವುದಾಗಿ ಎರಡು  ದಿನ ಬಿಟ್ಟು ಬರುವುದಾಗಿ ರೂಮಿನ ಬೀಗದ ಕೀಯನ್ನು ಮಾಲಕನಿಗೆ ನೀಡಿ ಚಂದ್ರ  ಅಲ್ಲಿಂದ ತೆರಳಿದ್ದಾನೆ.

ಎರಡು ದಿನ ಕಳೆದರು ಚಂದ್ರ ಮರಳದಿರುವುದರಿಂದ ಸಂಪರ್ಕಿಸಿದಾಗ  ಮೊಬೈಲ್ ಸ್ವಿಚ್ಡ್ ಆಫ್  ಆಗಿತ್ತು .  ಈ  ನಡುವೆ ಇಂದು ಬೆಳಿಗ್ಗೆ  ಕಟ್ಟಡದ ಮಾಲೀಕಿ  ಕೆಲಸದ   ಸಾಮಾಗ್ರಿ  ಕೊಂಡೊಯ್ಯಲು ರೋಮಿಗೆ ಬಂದು  ಬಾಗಿಲು  ತೆರೆದು  ನೋಡಿದಾಗ  ಮಹಿಳೆ  ಮೃತಪಟ್ಟ  ಸ್ಥಿತಿಯಲ್ಲಿ  ಪತ್ತೆಯಾಗಿದ್ದಾಳೆ . 

 ಕೊಡಲೇ   ವಿದ್ಯಾನಗರ  ಹಾಗೂ  ಕಾಸರಗೋಡು  ಪೊಲೀಸರಿಗೆ  ಮಾಹಿತಿ  ನೀಡಲಾಯಿತು.ಸ್ಥಳಕ್ಕೆ ಆಗಮಿಸಿದ   ಪೊಲೀಸರು  ಮಹಜರು ನಡೆಸಿದ್ದು, ಮಾಹಿತಿ  ಕಲೆ  ಹಾಕಿದ್ದಾರೆ 

ಮೃತದೇಹವನ್ನು  ಮರಣೋತ್ತರ  ಪರೀಕ್ಷೆಗಾಗಿ   ಪರಿಯಾರಂ   ವೈದ್ಯಕೀಯ ಕಾಲೇಜು   ಆಸ್ಪತ್ರೆಗೆ  ಕೊಂಡೊಯ್ಯಲಾಗಿದೆ. ಬೆರಳಚ್ಚು  ತಜ್ಞರು, ಶ್ವಾನದಳ  ಹಾಗೂ ಫಾರೆನ್ಸಿಕ್  ತಜ್ಞರು  ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದೆ. ಪರಾರಿಯಾಗಿರುವ  ಚಂದ್ರಗಾಗಿ  ಪೊಲೀಸರು   ತನಿಖೆ ನಡೆಸುತ್ತಿದ್ದಾರೆ.   

 

See also  ದರ್ಶನ್-ಯಶ್, ಅಭಿಷೇಕ್ ಗೆ ಪೊಲೀಸ್ ಭದ್ರತೆ ನೀಡಿ: ಸುಮಲತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು