News Kannada
Sunday, October 02 2022

ಕರ್ನಾಟಕ

ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ - 1 min read

Photo Credit :

ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಕಾಸರಗೋಡು: ಹದಿಮೂರು ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಜೀವಾವಧಿ ಸಜೆ ಮತ್ತು ೫೦ ಸಾವಿರ ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಫುನೀಡಿದೆ . ಜೀವನ ಪರ್ಯಂತ ಜೈಲಿನಲ್ಲೇ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶ ಪಿ. ಎಸ್ ಶಿವಕುಮಾರ್ ತೀರ್ಫು ನೀಡಿ ದ್ದು , ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೀವನಪರ್ಯಂತ ಜೈಲು ಶಿಕ್ಷೆ ನೀಡಿರುವ ಪ್ರಥಮ ಪ್ರಕರಣವಾಗಿದೆ.

ಕುಂಬಳೆ ಠಾಣಾ ವ್ಯಾಪ್ತಿಯ ಪಚ್ಚ೦ಬಳ ಪಂಜತ್ತೊಟ್ಟಿಯ ಅಬ್ದುಲ್ ಕರೀಂ (೩೪) ಶಿಕ್ಷೆಗೊಳಗಾದವನು . ೨೦೧೮ ರ ಏಪ್ರಿಲ್ ಎರಡರಂದು ಕೃತ್ಯ ನಡೆದಿತ್ತು .

ಬಾಡಿಗೆ ಕ್ವಾಟರ್ಸ್ ನಲ್ಲಿ ತಾಯಿ ಜೊತೆ ಮಲಗಿದ್ದ ಬಾಲಕಿಯನ್ನು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಕುಂಬಳೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು . ಬಾಲಕಿಯ ತಾಯಿ ಗೆ ಚೂರಿ ತೋರಿಸಿ ಬೆದರಿಸಿ ಈತ ಕೃತ್ಯ ನಡೆಸಿದ್ದನು . ಘಟನೆ ಬಗ್ಗೆ ಬಾಲಕಿಯೇ ಪೊಲೀಸ್ ಠಾಣೆ ಗೆ ಬಂದು ಮಾಹಿತಿ ನೀಡಿದ್ದಳು .

ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಪ್ರೇಮ್ ಸದನ್ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು .
೯೦ ದಿನಗಳೊಳಗೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರಿಂದ ಆರೋಪಿಗೆ ಜಾಮೀನು ಲಭಿಸಿರಲಿಲ್ಲ . ಕಳೆದ ಒಂಭತ್ತು ದಿನಗಳಿಂದ ಆರೋಪಿ ಗೆ ಹೊರಬರಲು ಸಾಧ್ಯವಾಗಿರಲಿಲ್ಲ .

ದಂಡದ ಮೊತ್ತವಾದ ೫೦ ಸಾವಿರ ರೂ . ವನ್ನು ಬಾಲಕಿಗೆ ನೀಡಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.
ಪ್ರಾಸಿಕ್ಯೂಷನ್ ಪರ ಸ್ಪೆಷಲ್ ಪ್ರಾಸಿಕ್ಯೂಟರ್ ಪಿ. ಆರ್ ಅಮ್ಮಣ್ಣಾಯ ವಾದಿಸಿದ್ದರು .

 

 

See also  ಮದ್ದೂರಿನಲ್ಲಿ ಮಸಣ ಸೇರಿದ ಮದುವೆ ದಿಬ್ಬಣ: 13ಮಂದಿ ಸಾವು, 20 ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು