News Kannada
Wednesday, October 05 2022

ಕರ್ನಾಟಕ

ನಾಟಿಕೋಳಿ ಸಾಕಾಣಿಕೆಯಿಂದ ಆರ್ಥಿಕ ಸ್ವಾವಲಂಬನೆ ಕಂಡುಕೊಂಡ ರೈತ - 1 min read

Photo Credit :

ನಾಟಿಕೋಳಿ ಸಾಕಾಣಿಕೆಯಿಂದ ಆರ್ಥಿಕ ಸ್ವಾವಲಂಬನೆ ಕಂಡುಕೊಂಡ ರೈತ

ಮಡಿಕೇರಿ: ಆರ್ಥಿಕ ಸ್ವಾವಲಂಬನೆಗೆ ನೂರೆಂಟು ಮಾರ್ಗ. ಯುಕ್ತ ಹಾದಿಯಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದರೆ ಯಶಸ್ಸು ಸಾಧ್ಯ ಎನ್ನುವುದನ್ನು ‘ಸಾವಯವ ನಾಟಿ ಕೋಳಿ ಸಾಕಾಣೆ’ ಮೂಲಕ ತೋರಿಸಿಕೊಟ್ಟಿದ್ದಾರೆ ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ನಿವಾಸಿ, ಕೃಷಿಕ ಮಾದೇಟಿರ ತಿಮ್ಮಯ್ಯ.

ಏಳು ಬೀಳುಗಳ ಕೃಷಿ ಚಟುವಟಿಕೆಗಳ ನಡುವೆ, ಆರ್ಥಿಕವಾಗಿ ಕೈ ಹಿಡಿಯಬಲ್ಲ ಉಪ ಕಸುಬಿನತ್ತ ಲಕ್ಷ್ಯ ಹರಿಸಿದ ಮಾದೇಟಿರ ತಿಮ್ಮಯ್ಯ ಅವರನ್ನು ಆಕರ್ಷಿಸಿದ್ದು ಕೋಳಿ ಸಾಕಾಣೆ. ಅದೂ, ಲಾಭವೊಂದೇ ಅಂತಿಮ ಗುರಿ ಎನ್ನುವ ವ್ಯಾಪಾರದ ಮಾರ್ಗಗಳನ್ನು ಬಿಟ್ಟ ನೇರ ಮಾರ್ಗ. ಅದುವೇ ಯಾವುದೇ ಕೃತಕ ಆಹಾರಗಳನ್ನು ಬಳಸದೆ, ಸಾವಯವ ರೀತಿಯಲ್ಲಿ ಕೋಳಿ ಸಾಕಾಣೆ ಮಾಡುವುದು ಎಂದರೆ ಯಾರನ್ನಾದರು ಅಚ್ಚರಿಗೆ ದೂಡದೇ ಇರದು.

ನೆರೆಯ ಆಂಧ್ರಪ್ರದೇಶದ ಹೈದ್ರಾಬಾದ್‍ನ ಎಸ್‍ಡಿ308 ಎನ್ನುವ ತಳಿಯ ಕೋಳಿಗಳ ಸಾಕಾಣೆಯಲ್ಲಿ ಮಾದೇಟಿರ ತಿಮ್ಮಯ್ಯ ತೊಡಗಿದ್ದು, ಈ ತಳಿಯ ಕೋಳಿಗಳ ವಿಶೇಷವೆಂದರೆ ವರ್ಷ ಪೂರ್ತಿ ಮೊಟ್ಟೆಗಳನ್ನು ನೀಡುವುದು. ಇದು ಕೃಷಿಕನ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆಯನ್ನು ನೀಡುವುದರಲ್ಲಿ ಸಂಶಯವಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ನಾಟಿ ಕೋಳಿ ಮೊಟ್ಟೆಯೊಂದಕ್ಕೆ 10 ರೂ.ಗಳಿಂದ 12 ರೂ.ಗಳ ಉತ್ತಮ ಧಾರಣೆ ಇರುವುದು ವಿಶೇಷ.

ಈ ಕೋಳಿ ಸಾಕಾಣೆಯಿಂದ ನಿತ್ಯವೂ ಆದಾಯಗಳಿಸುವುದರ ಜೊತೆಗೆ, ತೋಟಗಳಿಗೆ ಸಾವಯವ ಗೊಬ್ಬರವನ್ನು ಪಡೆದುಕೊಳ್ಳಲು ಸಾಧ್ಯವೆಂದು ತೋರಿಸಿಕೊಟ್ಟಿರುವ ಮಾದೇಟಿರ ತಿಮ್ಮಯ್ಯ ಅವರು,‘ಸಾವಯವ ನಾಟಿ ಕೋಳಿ ಸಾಕಾಣೆ’ಯಿಂದ ನಾವು ಸಮಾಜಕ್ಕೆ ಉತ್ತಮವಾದ ಹಾಗು ಆರೋಗ್ಯಕರ ಆಹಾರವನ್ನು ನೀಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿರುವುದು ಸಮಾಜದೆಡೆಗಿನ ಅವರ ಕಳಕಳಿಯನ್ನು ಸೂಚಿಸುತ್ತದೆ.

ಪ್ರೇರಣೆ ನೀಡಲು ಈ ಪ್ರಯತ್ನ
ಸಾವಯವ ರೀತಿಯ ನಾಟಿ ಕೋಳಿ ಸಾಕಾಣೆಯನ್ನು ನಮ್ಮಲ್ಲೂ ಮಾಡಿ ಲಾಭ ಗಳಿಸಬಹುದೆನ್ನುವುದನ್ನು ಸ್ಥಳೀಯ ಕೃಷಿಕರಿಗೆ ತೋರಿಸಿಕೊಡುವ ಮತ್ತು ಪ್ರೇರಣೆ ನೀಡುವುದು ಸಹ ನನ್ನ ಕೋಳಿ ಸಾಕಾಣೆಯ ಉದ್ದೇಶವೆನ್ನುವ ಮಾದೇಟಿರ ತಿಮ್ಮಯ್ಯ, ಕೇಂದ್ರ ಸರಕಾರದ ಮುದ್ರಾ ಯೋಜನೆಯ ಮೂಲಕ ಬ್ಯಾಂಕಿನ ಸಾಲದ ನೆರವನ್ನು ಪಡೆದು ಕೋಳಿ ಸಾಕಾಣೆಯಲ್ಲಿ ತೊಡಗಿರುವುದಾಗಿ ತಿಳಿಸುತ್ತಾರೆ.

ಗೂಡು ಹೀಗಿದೆ
ತಿಮ್ಮಯ್ಯ ಅವರು ತಮ್ಮ ಮನೆಯ ಹಿತ್ತಲಲ್ಲಿರುವ ಸಮತಟ್ಟಾದ ಜಾಗದಲ್ಲಿ ಸುಮಾರು 5×3 ಉದ್ದ ಅಗಲ ಹಾಗು ಸುಮಾರು 5 ಅಡಿ ಎತ್ತರದಲ್ಲಿ ಕಬ್ಬಿಣದ ಸಲಾಖೆಗಳಿಂದ ನಿರ್ಮಿಸಿದ ಗೂಡುಗಳಲ್ಲಿ ಕೋಳಿಗಳನ್ನು ಸಾಕುತ್ತಿದ್ದಾರೆ. ಕೋಳಿಗಳಿಗೆ ಅಗತ್ಯ ಸಾವಯವ ಆಹಾರ, ಸಾವಯವ ಔಷಧಿಗಳನ್ನು ಆಧುನಿಕ ವಿಧಾನದಲ್ಲಿ ನೀಡುವ ವ್ಯವಸ್ಥೆ ಇಲ್ಲಿ ಗಮನ ಸೆಳೆಯುವುದಲ್ಲದೆ, ಮೊಟ್ಟೆಗಳು ಸುರಕ್ಷಿತ ಮತ್ತು ಸರಾಗವಾಗಿ ಶೇಖರಣೆಯಾಗುವ ವ್ಯವಸ್ಥೆಯೂ ಇಲ್ಲಿದೆ.

ತಿಮ್ಮಯ್ಯ ಅವರು 72 ನಾಟಿ ಕೋಳಿಗಳನ್ನು ಸಾಕಿದ್ದು, ಇದರಿಂದ ದಿನಕ್ಕೆ ಸರಾಸರಿ 70 ಮೊಟ್ಟೆ ದೊರಕುತ್ತಿದ್ದು, ತಿಂಗಳಿಗೆ 15ರಿಂದ 18ಸಾವಿರ ಆದಾಯ ಪಡೆಯುತ್ತಿದ್ದಾರೆ. ವಿಶೇಷವೆಂದರೆ ಇದೀಗ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಹಾಗು ಸ್ವ ಉದ್ಯೋಗ ಸಂಸ್ಥೆಗಳು ಸ್ಥಳಕ್ಕೆ ಬಂದು ಕೋಳಿ ಸಾಕಾಣೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸಾವಯವ ಕೋಳಿ ಸಾಕಾಣೆಯ ಬಗ್ಗೆ ಆಸಕ್ತಿ ಇರುವವರು ಮಾದೇಟಿರ ತಿಮ್ಮಯ್ಯ ಅವರನ್ನು ಮೊ.9449822020, 9008204868 ಮೂಲಕ ಸಂಪರ್ಕಿಸಬಹುದಾಗಿದೆ.

See also  ಕಣಿವೆಗೆ ಉರುಳಿದ ಬಸ್: 6ಮಂದಿ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು