News Kannada
Thursday, October 06 2022

ಕರ್ನಾಟಕ

ಸಂತ್ರಸ್ತರ ಗ್ರಾಮದಲ್ಲಿ “ಅಕ್ಕ” ಬಳಗದಿಂದ ಶಾಲೆ ನಿರ್ಮಾಣ - 1 min read

Photo Credit :

ಸಂತ್ರಸ್ತರ ಗ್ರಾಮದಲ್ಲಿ “ಅಕ್ಕ” ಬಳಗದಿಂದ ಶಾಲೆ ನಿರ್ಮಾಣ

ಮಡಿಕೇರಿ: ಅಮೇರಿಕ ಕನ್ನಡ ಕೂಟಗಳ ಆಗರ(ಅಕ್ಕ) ಸಂಸ್ಥೆ ವತಿಯಿಂದ ತಾಲ್ಲೂಕಿನ ಮಕ್ಕಂದೂರಿನಲ್ಲಿ ನಿರ್ಮಿಸಲಾಗುವ ಶಾಲಾ ಕೊಠಡಿ ನಿರ್ಮಾಣದ ಸ್ಥಳವನ್ನು ಅಕ್ಕ ಸಂಸ್ಥೆಯ ಗೌರವ ಅಧ್ಯಕ್ಷರಾದ ಅಮರನಾಥ ಗೌಡ, ಅಧ್ಯಕ್ಷರಾದ ಶಿವಮೂರ್ತಿ ಕಿಲಾರ, ಮಾಜಿ ಅಧ್ಯಕ್ಷರಾದ ವಿಶ್ವಾಮಿತ್ರ ಇತರರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಅವರು ಶಾಲಾ ಕಟ್ಟಡವು ಮೂರು ಕೊಠಡಿಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಸಭಾಂಗಣ ಹಾಗೆಯೇ ಶೌಚಾಲಯ ಸೇರಿದಂತೆ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಶಾಲಾ ಕಟ್ಟಡವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯುವಂತಾಗಬೇಕು. ಇದರಿಂದ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ಕಿಲಾರ ಅವರು ನುಡಿದರು.

ಅಕ್ಕ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಅಮರಾಥ ಗೌಡ ಅವರು ಮಾತನಾಡಿ ಅಮೇರಿಕದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ನಾಡು ನುಡಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಮೇರಿಕ ಕನ್ನಡ ಕೂಟ ಕೆಲಸ ಮಾಡುತ್ತಿದೆ ಎಂದರು. ಸಂಸ್ಥೆಯು ಶಾಲೆಗಳು, ಮನೆ, ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷರಾದ ವಿಶ್ವಾಮಿತ್ರ ಅವರು ಮಾತನಾಡಿ ತವರೂರಿಗೆ ಏನಾದರೂ ಒಳ್ಳೆದನ್ನು ನೀಡಬೇಕು ಎಂಬ ಉದ್ದೇಶದಿಂದ ಶಾಲಾ ಕಟ್ಟಡ ನಿರ್ಮಿಸಲಾಗುತ್ತದೆ. ಅಕ್ಕ ಸಂಸ್ಥೆ ಹೆಮ್ಮರವಾಗಿ ಬೆಳೆದಿದ್ದು, ಕೈಲಾದಷ್ಟು ನಾಡಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಗುಲ್ಬರ್ಗಾ ವಿಭಾಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಕಾ.ರಾಮೇಶ್ವರಪ್ಪ ಅವರು ಮಾತನಾಡಿ ಕನ್ನಡ, ಕನ್ನಡಿಗರು, ನಾಡು ನುಡಿ ಬಗ್ಗೆ ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಅಕ್ಕ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಕವಿಗಳು, ಸಾಹಿತಿಗಳು, ಕಲಾವಿದರು ಕನ್ನಡ ಸಾಹಿತ್ಯ, ಸಂಸ್ಕøತಿ, ಕಲೆ, ಜಾನಪದವನ್ನು ಅನಾವರಣ ಮಾಡುವ ನಿಟ್ಟಿನಲ್ಲಿ ಅಕ್ಕ ಬಳಗ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಅಮೇರಿಕದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ಅಕ್ಕ ಬಳಗ ಶ್ರಮಿಸುತ್ತಿದ್ದು, ಅತೀವೃಷ್ಠಿ ಮತ್ತು ಅನಾವೃಷ್ಠಿ ಸಂದರ್ಭದಲ್ಲಿ ನೆರವು ನೀಡುವ ದಿಸೆಯಲ್ಲಿ ಅಕ್ಕ ಸಂಸ್ಥೆ ಮುಂದಾಗಿದೆ ಎಂದು ಅವರು ತಿಳಿಸಿದರು.

ಗ್ರಾ.ಪಂ.ಸದಸ್ಯರಾದ ಸತೀಶ್, ರಮೇಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಭವಾನಿ ಅವರು ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷರಾದ ಹರೀಶ್, ಮಧು, ಪಿಡಿಓ ಇತರರು ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲೆಯ ಶಿಕ್ಷಕರಾದ ರಂಜಿತ್ ನಿರೂಪಿಸಿ, ವಂದಿಸಿದರು.

See also  ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ; ದಕ್ಷಿಣ ಕನ್ನಡ ಮೊದಲು ; ಬಾಲಕರ ಮೇಲುಗೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು