News Kannada
Saturday, October 08 2022

ಕರ್ನಾಟಕ

ನಗರಸಭೆಯ ವಿಶೇಷ ಸಭೆ: ಪ್ರವಾಸೋದ್ಯಮ ತಾಣದ ಯೋಜನೆಗೆ ಕಾಂಗ್ರೆಸ್ ಬೆಂಬಲ, ಬಿಜೆಪಿ ವಿರೋಧ - 1 min read

Photo Credit :

ನಗರಸಭೆಯ ವಿಶೇಷ ಸಭೆ: ಪ್ರವಾಸೋದ್ಯಮ ತಾಣದ ಯೋಜನೆಗೆ ಕಾಂಗ್ರೆಸ್ ಬೆಂಬಲ, ಬಿಜೆಪಿ ವಿರೋಧ

ಮಡಿಕೇರಿ: ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಹಾಗೂ ನಗರಸಭಾ ಸದಸ್ಯರ ಜಂಟಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ನಗರಸಭೆಯ ವಿಶೇಷ ಸಭೆ ನಿರ್ಧರಿಸಿದೆ.

ಪ್ರಕೃತಿ ವಿಕೋಪದ ಸಂದರ್ಭ ಕುಸಿತಕ್ಕೊಳಗಾದ ಮಡಿಕೇರಿಯ ಕೇಂದ್ರ ಸ್ಥಾನ ಹಳೇ ಖಾಸಗಿ ಬಸ್ ನಿಲ್ದಾಣವನ್ನು ವಿನೂತನವಾಗಿ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ ನಗರಸಭೆಯ ವಿಶೇಷ ಸಭೆ ಆಯೋಜಿತವಾಗಿತ್ತು.

ಸಭೆಯಲ್ಲಿ ನಿವೃತ್ತ ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಸತ್ಯನಾರಾಯಣ ರಾವ್ ಪಾಲ್ಗೊಂಡು ಮಣ್ಣಿನ ಗುಣಮಟ್ಟದೊಂದಿಗೆ ತಾಂತ್ರಿಕ ಅಂಶಗಳನ್ನು ಸುಧೀರ್ಘವಾಗಿ ಮಂಡಿಸಿದರು.

ಆ ಬಳಿಕ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ನಗರಸಭಾ ಸದಸ್ಯರು ಹಳೇ ಖಾಸಗಿ ಬಸ್ ನಿಲ್ದಾಣ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳಿಸಲು ಪರ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಹಿರಿಯ ಸದಸ್ಯ ಪಿ.ಡಿ.ಪೆÇನ್ನಪ್ಪ ಮಾತನಾಡಿ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಈಗಾಗಲೇ ಕಾಮಗಾರಿಗೆ ಅನುಮತಿ ನೀಡಿರುವಂತೆ ತಡೆಗೋಡೆ ನಿರ್ಮಾಣವಾಗಲೇಬೇಕು. ಅದನ್ನು ಬಿಟ್ಟು ಹೊಸದ್ದಾಗಿ ಪ್ರವಾಸೋದ್ಯಮ ತಾಣ ಎಂದು ಕಾಮಗಾರಿ ಪ್ರಾರಂಭಿಸಿದರೆ ಈಗ ಕಾಮಗಾರಿ ಗುತ್ತಿಗೆ ಪಡೆದುಕೊಂಡವರು ನ್ಯಾಯಾಲಯಕ್ಕೆ ತೆರಳಿ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇದೆ. ಅಂತೆಯೇ ಮಣ್ಣಿನ ಪರೀಕ್ಷೆ ಮೊದಲು ನಡೆಯಬೇಕೆಂದು ಸಲಹೆ ನೀಡಿದರು.

ಎಸ್.ಡಿ.ಪಿ.ಐ ಸದಸ್ಯ ಮನ್ಸೂರ್ ಮಾತನಾಡಿ, ಇದರಿಂದ ನಗರಸಭೆಗೆ ಆಗುವ ಲಾಭವಾದರೂ ಏನು ಎಂದು ಪ್ರಶ್ನಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಪ್ರತ್ರಿಕ್ರಿಯಿಸಿ, ವಿನೂತನ ರೀತಿಯಲ್ಲಿ ಪ್ರವಾಸೋದ್ಯಮ ತಾಣವಾದಲ್ಲಿ ಮಡಿಕೇರಿಗೆ ಬರುವ ಪ್ರವಾಸಿಗರಿಗೂ ಹೊಸದ್ದೊಂದು ಪ್ರವಾಸಿ ಆಕಷ9ಣೆಗೆ ಅನುಕೂಲವಾಗುತ್ತದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳೂ ಕೂಡ ಈ ಯೋಜನೆ ಬಗ್ಗೆ ಆಸಕ್ತಿ ತಳೆದಿದ್ದಾರೆ ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ ಮಾತನಾಡಿ, ಕುಸಿದು ಬಿದ್ದಿರುವ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಈಗಾಗಲೇ ಗುತ್ತಿಗೆ ನೀಡಿರುವ ತಡೆಗೋಡೆ ನಿರ್ಮಾಣ ಮೊದಲಾಗಬೇಕು. ಅನಂತರ ಆ ಜಾಗದಲ್ಲಿ ಏನಾಗಬೇಕೆಂದು ತೀರ್ಮಾನ ಕೈಗೊಳ್ಳಬೇಕೇ ವಿನಾ ಪ್ರವಾಸೀ ತಾಣವಾಗುವ ತೀರ್ಮಾನಕ್ಕೆ ಸಮ್ಮತಿ ಇಲ್ಲ ಎಂದರು.

ಬಿಜೆಪಿ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಹಳೇ ಖಾಸಗಿ ಬಸ್ ನಿಲ್ದಾಣ ಈಗಾಗಲೇ ಪ್ರಕೃತಿ ವಿಕೋಪಕ್ಕೀಡಾಗಿ ಅಪಾಯದಲ್ಲಿದೆ. ಇಲ್ಲಿಯೇ ಮತ್ತೆ ಜನದಟ್ಟಣೆಗೆ ಕಾರಣವಾಗುವ ಪ್ರವಾಸೀ ತಾಣ ನಿರ್ಮಾಣದ ಚಿಂತನೆ ಸೂಕ್ತ ಅಲ್ಲವೇ ಅಲ್ಲ. ಮಣ್ಣು ಸಂಪೂರ್ಣ ಸಡಿಲವಾಗಿರುವಾಗ ಹೇಗೆ ಜನರಿಗೆ ಈ ಜಾಗವನ್ನು ಬಿಟ್ಟುಕೊಡುತ್ತೀರಿ ಎಂದು ಪ್ರಶ್ನಿಸಿದರಲ್ಲದೇ, 1.07 ಕೋಟಿ ರು. ವೆಚ್ಚದ ತಡೆಗೋಡೆ ನಿರ್ಮಾಣ ನಗರಸಭೆಯ ಆದ್ಯತೆಯಾಗಲಿ ಎಂದು ಹೇಳಿದರು. ಪ್ರವಾಸೋದ್ಯಮಕ್ಕೆ ಮಡಿಕೇರಿ ನಗರದಲ್ಲಿ ಬೇರೆ ಸಾಕಷ್ಟು ಸೂಕ್ತ ಜಾಗವಿದೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ ಗಳು ಬರುವುದರಿಂದಾಗಿ ವಾಹನದೊಂದಿಗೆ ಜನದಟ್ಟಣೆಯೂ ಉಂಟಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಉದ್ದೇಶಿತ ಜಾಗದಲ್ಲಿ ಅತ್ಯಗತ್ಯವಾಗಿರುವ ವಾಹನ ನಿಲುಗಡೆಗೆ ಜಾಗ ನೀಡಿ ಎಂದೂ ರಮೇಶ್ ಸಲಹೆ ನೀಡಿದರು.

See also  ಅಮಾನಿಕೆರೆಯಲ್ಲಿ ಜಿನುಗುತ್ತಿರುವ ನೀರು: ರೈತರ ಪ್ರತಿಭಟನೆ

ಸದಸ್ಯ ಪಿ.ಡಿ.ಪೆÇನ್ನಪ್ಪ ಮಾತನಾಡಿ, ಮಡಿಕೇರಿ ನಗರಕ್ಕೆ ಅತ್ಯಗತ್ಯವಾಗಿರುವ ವಾಹನ ನಿಲುಗಡೆ ಸಂಬಂಧಿತ 3 ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಎಂ.ನಂದಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿ ಆಸಕ್ತಿ ತಳೆದಿರುವಂತೆ ಪ್ರವಾಸೋದ್ಯಮಕ್ಕೆ ಈ ಜಾಗದಲ್ಲಿ ನಗರಸಭೆ ಅವಕಾಶ ಮಾಡಿಕೊಡುವ ನಿರ್ಧಾರ ಕೈಗೊಳ್ಳುವಂತೆ ಅಧ್ಯಕ್ಷರಿಗೆ ಸೂಚಿಸಿದರು.

ಹಿರಿಯ ಸದಸ್ಯೆ ಶ್ರೀಮತಿ ಬಂಗೇರಾ ಪ್ರತಿಕ್ರಿಯಿಸಿ, ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರವಾಸೀ ತಾಣ ರೂಪಿಸಿ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಆದರೆ, ಈ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ತಡೆಗೋಡೆ ನಿರ್ಮಾಣಕ್ಕೆ ನಮ್ಮ ಒಪ್ಪಿಗೆಯಿದೆಯೇ ವಿನಾ ಪ್ರವಾಸೀ ತಾಣ ಹೇಗಿರಲಿದೆ ಎಂಬ ಕಲ್ಪನೆಯೇ ಇಲ್ಲದೆ ಇಂಥ ಯೋಜನೆಗೆ ಅವಕಾಶ ನೀಡಲು ಒಪ್ಪಲಾರೆವು ಎಂದು ಪಟ್ಟು ಹಿಡಿದರು. ಪ್ರವಾಸೀ ತಾಣಕ್ಕೆ ಈ ಜಾಗದಲ್ಲಿ ತಮ್ಮ ವಿರೋಧವಿದೆ ಎಂದೂ ಬಿಜೆಪಿ ಸದಸ್ಯರು ಸ್ಪಷ್ಟಪಡಿಸಿದರು.

ಈ ಸಂದರ್ಭ ಶೀಘ್ರದಲ್ಲಿ ಮಡಿಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಮತ್ತು ನಗರಸಭಾ ಸದಸ್ಯರ ಜಂಟಿ ಸಭೆ ಆಯೋಜಿಸಿ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಏನು ಮಾಡಬೇಕೆಂಬ ತೀರ್ಮಾನ ಕೈಗೊಳ್ಳಲು ಸಭೆ ಸಮ್ಮತಿಸಿತು.

ಸುಮಾರು ಎರಡೂವರೆ ಗಂಟೆ ನಡೆದ ಸಭೆಯಲ್ಲಿ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಯಾವ ರೀತಿಯ ಪ್ರವಾಸೀ ತಾಣ ರೂಪುಗೊಳ್ಳುತ್ತದೆ ಎಂಬ ನೀಲಿನಕಾಶೆಯನ್ನೇ ಪ್ರದರ್ಶಿಸದಿರುವುದು ಹಲವಷ್ಟು ಸದಸ್ಯರ ಅಸಮದಾನಕ್ಕೆ ಮತ್ತು ಗೊಂದಲಕ್ಕೂ ಕಾರಣವಾಯಿತು. ಹೀಗಾಗಿ ಉದ್ದೇಶಿತ ಸಭೆ ತನ್ನ ಅರ್ಥ ಕಳೆದುಕೊಂಡಂತಿತ್ತು.

ನಗರಸಭೆಯ ಪೌರಾಯುಕ್ತ ರಮೇಶ್ ಹಾಜರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು