News Kannada
Friday, October 07 2022

ಕರ್ನಾಟಕ

ಮಹಿಳೆ ಕೊಲೆ ಪ್ರಕರಣ: ಶಿವಮೊಗ್ಗದಲ್ಲಿ ಆರೋಪಿ ಸೆರೆ ಹಿಡಿದ ಕಾಸರಗೋಡು ಪೊಲೀಸರು - 1 min read

Photo Credit :

ಮಹಿಳೆ ಕೊಲೆ ಪ್ರಕರಣ: ಶಿವಮೊಗ್ಗದಲ್ಲಿ ಆರೋಪಿ ಸೆರೆ ಹಿಡಿದ ಕಾಸರಗೋಡು ಪೊಲೀಸರು

ಕಾಸರಗೋಡು: ಕರ್ನಾಟಕ ಗದಗ ಮೂಲದ ಮಹಿಳೆಯ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ.

ಬಂಧಿತನನ್ನು ಬೆಳಗಾವಿ ಕೆರೆಕೊಪ್ಪದ ಚಂದ್ರು ರಮೇಶ್ ಕಾಂಬ್ಳೆ ಯಾನೆ ಸುನಿಲ್(39) ಎಂದು ಗುರುತಿಸಲಾಗಿದೆ. ಚಂದ್ರುನನ್ನು ಶಿವಮೊಗ್ಗದಲ್ಲಿ ತನಿಖಾ ತಂಡ ಬಂಧಿಸಿದೆ.

ಹುಬ್ಬಳಿಯ ಸರಸು ಯಾನೆ ಸರಸ್ವತಿ(35) ಎಂಬಾಕೆಯ ಕೊಲೆಗೆ ಸಂಬಂಧಪಟ್ಟಂತೆ ಚಂದ್ರುನನ್ನು ಬಂಧಿಸಲಾಗಿದೆ. ಮದ್ಯದ ಅಮಲಿನಲ್ಲಿ ಸರಸ್ವತಿ ಜೊತೆ ಜಗಳವಾಗಿದ್ದು, ಸರಸ್ವತಿಯ ತಲೆಯನ್ನು ಗೋಡೆಗೆ ಬಡಿದು ಕೊಲೆ ಮಾಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ.

ಕಾಸರಗೋಡಿನಲ್ಲಿ ಟೈಲ್ಸ್ ಹಾಸುವ ಕೆಲಸ ನಿರ್ವಹಿಸುತ್ತಿದ್ದ ಚಂದ್ರು ನಗರ ಹೊರವಲಯದ ವಿದ್ಯಾನಗರ ಚಾಲದಲ್ಲಿರುವ ಮನೆಯೊಂದರಲ್ಲಿ ಸರಸ್ವತಿ ಜೊತೆ ವಾಸವಾಗಿದ್ದ.

ಡಿಸಂಬರ್ 20ರಂದು ಸರಸ್ವತಿ ವಿದ್ಯಾನಗರದಲ್ಲಿರುವ ಕ್ವಾಟರ್ಸ್ ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈಕೆ ಜೊತೆ ಇದ್ದ ಚಂದ್ರ ನಾಪತ್ತೆಯಾಗಿದ್ದ. ಕ್ವಾಟರ್ಸ್ ಗೆ ಬೀಗ ಹಾಕಿ ಕ್ವಾಟರ್ಸ್ ನ ಮಾಲಕನಿಗೆ ಕೀಲಿಕೈಯನ್ನು ನೀಡಿ ಈತ ಪರಾರಿಯಾಗಿದ್ದನು. ನಾಲ್ಕು ದಿನ ಕಳೆದರೂ ಈತ ಮರಳಿ ಬರದಿದ್ದುರಿಂದ ಈತನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಕ್ವಾಟರ್ಸ್ ಗೆ ಬಂದ ಮಾಲಕ, ಕೆಲಸದ ಸಾಮಾಗ್ರಿಗಳನ್ನು ಕೊಂಡೊಯ್ಯಲು ಬಾಗಿಲು ತೆಗೆದು ನೋಡಿದಾಗ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಿದ್ಯಾನಗರ ಮತ್ತು ಕಾಸರಗೋಡು ಪೊಲೀಸರು ಸ್ಥಕ್ಕಾಗಮಿಸಿ ತನಿಖೆ ನಡೆಸಿದ್ದರು.

See also  ಜೆಡಿಎಸ್ ಗೆ ಇದು ಕೊನೆ ಚುನಾವಣೆ: ಸಚಿವ ಸದಾನಂದಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು