News Kannada
Tuesday, November 29 2022

ಕರ್ನಾಟಕ

ಸಿದ್ಧಗಂಗಾ ಶ್ರೀಗಳು ಬೇಗ ಗುಣಮುಖರಾಗಲು ವಿಶೇಷ ಪೂಜೆ   - 1 min read

Photo Credit :

ಸಿದ್ಧಗಂಗಾ ಶ್ರೀಗಳು ಬೇಗ ಗುಣಮುಖರಾಗಲು ವಿಶೇಷ ಪೂಜೆ   

ಮೈಸೂರು: ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗಲಿ ಹಾಗೂ ಅವರಿಗೆ ಭಾರತ ರತ್ನ ನೀಡಲಿ ಎಂದು ತ್ಯಾಗರಾಜ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪಾತಿ ಫೌಂಡೇಷನ್ ಹಾಗೂ ಸಿದ್ದಗಂಗಾ ಶ್ರೀಗಳ ಭಕ್ತ ವೃಂದದಿಂದ ವಿಶೇಷ ಅಭಿಷೇಕ ಹಾಗೂ ಶ್ರೀಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 

ಉತ್ತರದಲ್ಲಿ ಗಂಗೆ ಇದ್ದರೆ ದಕ್ಷಿಣದಲ್ಲಿ ಸಿದ್ದಗಂಗೆ ಇದೆ ಎಂಬ ಮಾತನ್ನು ಅಂದಿನ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ್ದರು. ಈ ಮಾತಿನಂತೆ ತ್ರಿವಿಧ ದಾಸೋಹಿಗಳಾದ ಶ್ರೀ ಸಿದ್ಧಗಂಗಾ ಶ್ರೀಗಳು ಜಾತಿಮತ ನೋಡದೇ ಎಲ್ಲ ಬಡ ಮಕ್ಕಳಿಗೂ ಉಚಿತ ಶಿಕ್ಷಣ ಮತ್ತು ಉಚಿತ ವಸತಿ ಕಲ್ಪಿಸುವುದರ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ. ಅವರ ಈ ಒಂದು ಕ್ರಾಂತಿಕಾರಿ ಪವಾಡ. ಈ ಭೂಮಿ ಇರುವವರೆಗೂ ಪ್ರಸ್ತುತ.  ಆದ್ದರಿಂದ ಶ್ರೀಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಪಾತಿ ಫೌಂಡೇಷನ್ ಅಧ್ಯಕ್ಷರಾದ ಪಾರ್ಥಸಾರತಿಯವರು ತಮ್ಮ ಮಾತಿನಲ್ಲಿ ಶ್ರೀಗಳ ಗುಣಗಾನ ನಡೆಸಿದರು. 

ಶ್ರೀಗಳಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದರೆ ಎಲ್ಲ ಭಕ್ತವೃಂದ ಮತ್ತು ಪ್ರಜೆಗಳಿಗೆ ಅತ್ಯಂತ ಸಂತೋಷದ ಸಂಗತಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ರಾಷ್ಟ್ರ ಪತಿಗಳು ಮನಸ್ಸು ಮಾಡಿ ಆದಷ್ಟು ಬೇಗ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮನವಿ ಮಾಡಿದರು. 

ವಿಪ್ರ ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಮಾಜಿ ನಗರ ಪಾಲಿಕೆ ಸದಸ್ಯರಾದ ಯಮುನಾ, ವಿಪ್ರ ಯುವ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ಕನ್ನಡ ಪರ ಹೋರಾಟಗಾರರಾದ ತಾಯೂರು ವಿಠಲಮೂರ್ತಿ, ನಂ.ಸಿದ್ದಪ್ಪ, ಎನ್.ಪ್ರಕಾಶ್, ನಾಗರಾಜು, ನವೀನ್ ಕುಮಾರ್,  ಹೆಚ್.ವಿ.ಭಾಸ್ಕರ್, ಮಹದೇವ್ ಸ್ವಾಮಿ, ಮದನ್‍ಕುಮಾರ್, ದೀಪಕ್, ನವೀನ್ ಕುಮಾರ್, ಹರೀಶ್ ನಾಯ್ಡು, ಮದನ್ ಕುಮಾರ್,  ಧನರಾಜ್, ಪ್ರವೀಣ್, ಪುಷ್ಪಾವತಿ, ಶಿವಕುಮಾರ್, ಷಡಾಕ್ಷರಿ, ಮಹದೇವ ಪ್ರಸಾದ್, ನಾಗೇಂದ್ರ ಕುಮಾರ್, ಬಸವರಾಜು ಮೊದಲಾದವರು ಇದ್ದರು.

 

See also  ಮಗನಿಂದಲೇ ಹೆಸರು ಹಾಳು ಮಾಡಿಕೊಂಡ ಯಡಿಯೂರಪ್ಪ ; ಹೆಚ್‌ ವಿಶ್ವನಾಥ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು