ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದ್ದು, ಉಸಿರಾಟದ ಸಮಸ್ಯೆ ಕಡಿಮೆಯಾಗಿದೆ. ಶನಿವಾರ (ಇಂದು) ನಾಲ್ಕು ಗಂಟೆಗಳ ಕಾಲ ಸಹಜವಾಗಿ ಉಸಿರಾಟ ನಡೆಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ವಾಮೀಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ದಿನದಲ್ಲಿ 1 ಗಂಟೆ ಮಾತ್ರ ಸಹಜ ಉಸಿರಾಟ ಮಾಡುತ್ತಿದ್ದರು.
ಮಠದಲ್ಲಿ ಗುರುವಾರ ರಾತ್ರಿಯಿಂದ ಉಸಿರಾಟದಲ್ಲಿ ಚೇತರಿಕೆಯಾಗುತ್ತಿದ್ದು 4 ಗಂಟೆಗಳ ಕಾಲ ಸಹಜವಾಗಿ ಉಸಿರಾಟ ಮಾಡುತ್ತಿದ್ದಾರೆ ಎಂದು ಶ್ರೀಗಳ ವೈದ್ಯರು ಡಾ.ಪರಮೇಶ್ ತಿಳಿಸಿದ್ದಾರೆ.