ತುಮಕೂರು: ಶಿವಕೈರಾಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಬರೆದಿಟ್ಟಿರುವಂತೆ ಅಂತಿಮ ಕ್ರಿಯಾಸಮಾಧಿ ನೆರವೇರಿಸಲಾಗುವುದು ಎಂದು ಸಿದ್ಧಗಂಗಾ ಶ್ರೀಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಕ್ರಿಯಾಸಮಾಧಿ ವಿಧಿವಿಧಾನಗಳ ಬಗ್ಗೆ ಪರಿಶೀಲನೆ, ಮಠದ ಆವರಣದಲ್ಲಿನ ವ್ಯವಸ್ಥೆ ಬಗ್ಗೆ ಮಂಗಳವಾರ ಬೆಳಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಂದು ಮಧ್ಯಾಹ್ನ ಮೂರು ಗಂಟೆ ತನಕ ಸ್ವಾಮೀಜಿ ಅವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಕ್ರಿಯಾಸಮಾಧಿ ಕಾರ್ಯಗಳು ನಡೆಯಲಿದೆ. ಐದು ಗಂಟೆ ವೇಳೆ ಅಂತಿಮ ಕ್ರಿಯಾಸಮಾಧಿಯು ನಡೆಯಲಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.