ಕಾಸರಗೋಡು: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟದಿಂದ ತಿರುವನಂತಪುರದ ರಾಜ್ ಭವನ್ ಮುಂಭಾಗದಲ್ಲಿ ಬುಧವಾರದಿಂದ ನಿರಾಹಾರ ಸತ್ಯಾಗ್ರಹ ಆರಂಭಿಸಿದೆ, ಎಲ್ಲಾ ಸಂತ್ರಸ್ತರನ್ನು ಸಂತ್ರಸ್ತ ಪಟ್ಟಿಗೆ ಸೇರ್ಪಡೆಗೊಳಿಸಬೇಕು.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ಸಂತ್ರಸ್ಥರಿಗೆ ಸಹಾಯಧನ ವಿತರಿಸಬೇಕು , ಸಂತ್ರಸ್ತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ನಡೆಸಲಾಗು ತ್ತಿದೆ.
ಸತ್ಯಾಗ್ರಹಕ್ಕೆ ವಿವಿಧ ಸಾಮಾಜಿಕ , ಸಾಂಸ್ಕೃತಿಕ ಮುಖಂಡರು , ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಕಾಂಗ್ರೆಸ್ ನಾಯಕ ವಿ .ಎಂ ಸುಧೀರನ್ , ಕೂಡಂಕುಳಂ ಹೋರಾಟ ಸಮಿತಿ ಮುಖಂಡ ಉದಯ ಕುಮಾರ್ ಮೊದಲಾದವರು ಬುಧವಾರ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ಘೋಷಿಸಿದರು.
ಸರಕಾರ ಬೇಡಿಕೆ ಈಡೇರಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ