ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನಾಎನ್ ಡಿಎ ಸರ್ಕಾರದ ಕೊನೆಯ ಬಜೆಟ್ ನ್ನು ಕೇಂದ್ರ ಸಚಿವಪಿಯೂಷ್ ಗೋಯಲ್ ಅವರು ಮಂಡಿಸಲಿದ್ದಾರೆ.
ಸಂಪ್ರದಾಯದಂತೆ ಬಜೆಟ್ ಗೂ ಮುನ್ನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿಯಾದ ವಿತ್ತ ಸಚಿವ. ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಬಜೆಟ್ ಮಂಡನೆಯಲ್ಲಿ ಏನಿದೆ:
2022ರ ವೇಳೆಗೆ ನವಭಾರತ ನಿರ್ಮಾಣವಾಗಲಿದೆ. ಹಣದುಬ್ಬ ದರ ನಿಯಂತ್ರಣವಾಗಿದ್ದು ಭಾರತ ರ್ಥಿಕವಾಗಿ ಮುನ್ನಡೆಯುತ್ತಿದ್ದು, ಭಾರತ ಜಾಗತೀಕವಾಗಿ 6ನೇ ಸ್ಥಾನದಲ್ಲಿದೆ.
2008ರಿಂದ 2014ರ ವರೆಗೆ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಯಾಗಿಲ್ಲ. 5 ವರ್ಷ ಭಷ್ಟಚಾರ ಮುಕ್ತ ಸರ್ಕಾರವಾಗಿ ಮುನ್ನಡೆ. ಜಾತಿವಾದ ಭಯೋತ್ಪಾದನೆ ನಿಯಂತ್ರಣ. ಜಿಎಸ್ ಟಿ ಹಾಗೂ ಇತರೆ ತೆರಿಗೆಗಳ ಮೂಲಕ ಆದಾಯ ಹೆಚ್ಚಳ.
60ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಯೋಜನೆಯಡಿ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ನೀಡಲಾಗುವುದು ಎಂದು ವಿತ್ತ ಸಚಿವ ಪಿಯುಷ್ ಗೋಯೆಲ್ ಬಜೆಟ್ ನಲ್ಲಿ ಮಂಡಿಸಿದರು.
ಅಂಗನವಾಡಿ ಕಾರ್ಯಕರ್ತರ ವೇತನವನ್ನು ಶೇ.50ರಷ್ಟು ಹೆಚ್ಚಿಸಲು ನಿರ್ಧಾರ.
ಇಎಸ್ ಯ ಅರ್ಹತಾ ಮಿತಿ 15 ಸಾವಿರದಿಂದ 21 ಸಾವಿರ ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ಹಣ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ತಲುಪಲಿದೆ.
2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸೌಲಭ್ಯ. ಉದ್ಯೋಗಖಾತ್ರಿ ಯೋಜನೆಗೆ 60ಸಾವಿರ ಕೋಟಿ ಮೀಸಲು ಇಟ್ಟಿದ್ದು ಇನ್ನಷ್ಟು ಹೆಚ್ಚಿಸಲಾಗುವುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ 12 ಕೋಟಿ ಸಣ್ಣ ರೈತರಿಗೆ ಅನುಕೂಲ. ಯೊಜನೆಗಾಗಿ 75 ಸಾವಿರ ಕೋಟಿ ರೂಪಾಯಿ.
ಹರಿಯಾಣದಲ್ಲಿ 22ನೇ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪನೆ.
ರೈತರ ನೆರವಿಗಾಗಿ 75 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ದೇಶದ 12 ಕೋಟಿ ರೈತರಿಗೆ ಲಾಭ ದೊರೆಯಲಿದೆ.
ಗೋವುಗಳ ರಕ್ಷಣೆಗಾಗಿ ರಾಷ್ಟ್ರೀಯ ಕಾಮಧೇನು ಆಯೋಗ.
ರಕ್ಷಣಾ ವಲಯಕ್ಕೆ 3ಲಕ್ಷ ಕೋಟಿ ಅಧಿಕ ಮೊತ್ತ ಮೀಸಲು.
ಉಜ್ವಲ ಯೋಜನೆಯಡಿ 8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್ ಪಿಜಿ ಸಂಪರ್ಕ ವ್ಯವಸ್ಥೆ.
ಮಹಿಳಾ ಸಬಲೀಕರಣದ ಹಿನ್ನೆಲೆ ಹೆರಿಗೆ ರಜೆ 26 ವಾರಗಳಿಗೆ ಏರಿಕೆ.
ಒಳನಾಡು ಸಾರಿಗೆ , ಮೂಲಕ ಕೋಲ್ಕತ್ತದಿಂದ ವಾರಾಣಸಿಗೆ ಸಂಪರ್ಕ.
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ 5 ವರ್ಷಗಳಲ್ಲಿ 355.33 ಲಕ್ಷ ಕೋಟಿ ಆರ್ಥಿಕ ವ್ಯವಸ್ಥೆಯಾಗುವ ಗುರಿ.
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ ಆದಾಯ ಸಹಕಾರ.
2013-14ರಲ್ಲಿ ತೆರಿಗೆ 6.38 ಲಕ್ಷ ಕೋಟಿಯಾಗಿತ್ತು. ಇದೀಗ 12ಲಕ್ಷ ಕೋಟಿ ಆಗಿದೆ ಎಂದು ವಿತ್ತ ಸಚಿವರು ತಿಳಿಸಿದರು.
5ಲಕ್ಷ ಆದಾಯದವರೆಗೆ ಯಾವುದೇ ತೆರಿಗೆ ಇಲ್ಲ. ಶೇ 5ರಷ್ಟು ಇದ್ದ ತೆರಿಗೆಯನ್ನು ರದ್ದುಗೊಳಿಸುವುದಾಗಿ ಘೋಷಣೆ.
ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ.
ಸ್ಟಾಂಡರ್ಡ್ ಡಿಡಕ್ಷನ್ 40ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ.
2.4ಲಕ್ಷದ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ.