ಎಚ್.ಡಿ.ಕೋಟೆ: ಇಲ್ಲಿನ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದ ಅಡುಗೆ ತಯಾರಕಿ ಪುಟ್ಟಮ್ಮ(40)ಎಂಬವರನ್ನು ಅದೇ ವಿದ್ಯಾರ್ಥಿನಿಲಯದ ಅಡುಗೆ ತಯಾರಕರಾದ ಮಹದೇವಮ್ಮ ಲಕ್ಷಮ್ಮ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಮೃತ ಪುಟ್ಟಮ್ಮ ಅವರು ವಿದ್ಯಾರ್ಥಿ ನಿಲಯದಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ವಾರ್ಡನ್ ಗೆ ತಿಳಿಸಿದ ಹಿನ್ನೆಲೆ ಕೋಪಗೊಂಡ ಮಹಾದೇವಮ್ಮ, ಲಕ್ಷಮ್ಮ ಅವರು ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದರಿಂದ ಪುಟ್ಟಮ್ಮ ಅವರು ಫೆ.11ರಂದು ಸಾವನ್ನಪ್ಪಿದ್ದರು.