ಕಾರವಾರ: ಗೋಕರ್ಣದ ಕುಡ್ಲೆ ಕಡಲತೀರದ ಬಳಿ ಶನಿವಾರ ತಡರಾತ್ರಿ ಅಕ್ರಮವಾಗಿ ರೇವ್ ಪಾರ್ಟಿ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ವಿದೇಶಿಗರು ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇಸ್ರೇಲ್ ಮೂಲದ ಗೆಲ್ ಸೆಲ್ ಮನ್ (30), ಪಿಂಟೋ (30) ಹಾಗೂ ಕಾಸರಗೋಡು ಮೂಲದ ಗೋಕರ್ಣದ ರೆಗ್ಯುಲರ್ ರೆಸಾರ್ಟ್ ನಲ್ಲಿ ಕೆಲಸ ಮಾಡುವ ಇರ್ಫಾನ್ ಎಂಬುವವರನ್ನು ಬಂಧನ ಮಾಡಲಾಗಿದೆ.
ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ರೆಗ್ಯೂಲಸ್ ರೆಸಾರ್ಟ್ ಹಾಗೂ ಅರಣ್ಯಪ್ರದೇಶದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಮಾದಕದ್ರವ್ಯ ಹಾಗೂ ಮಾದಕವಸ್ತುಗಳಾದ ಚರಸ್ ಹಾಗೂ ಕೆಟೋಮಿನ್ ಇಟ್ಟುಕೊಂಡಿದ್ದ ಇಬ್ಬರು ಇಸ್ರೇಲ್ ಮೂಲದವರನ್ನು ಬಂಧನ ಮಾಡಲಾಗಿದೆ. ಎರಡು ಕಡೆ ಪಾರ್ಟಿಯಲ್ಲಿ ಬಳಸಿದ್ದ ಮದ್ಯಕ್ಕೆ ಯಾವುದೇ ಅನುಮತಿ ಪಡೆಯದ ಹಿನ್ನಲೆಯಲ್ಲಿ ಸೌಂಡ್ ಸಿಸ್ಟಮ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋಕರ್ಣ ದ ಸಿಪಿಐ ಸಂತೋಷ್ ಶಟ್ಟಿ ,ಪಿ.ಎಸ್,ಐ ಸಂತೋಷ್,ಅಂಕೋಲಾದ ಪಿಎಸ್ಐ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದ್ದು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.