News Kannada
Friday, December 09 2022

ಕರ್ನಾಟಕ

ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ: ಸಿಪಿಎಂ ಮುಖಂಡನ ಸೆರೆ

Photo Credit :

ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ: ಸಿಪಿಎಂ ಮುಖಂಡನ ಸೆರೆ

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾದ ಪೆರಿಯದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಮುಖಂಡನೋರ್ವನನ್ನು ತನಿಖಾ ತಂಡ ಬಂಧಿಸಿದೆ.

ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಸದಸ್ಯ ಎ. ಪೀತಾಂಬರನ್ ನನ್ನು ತನಿಖಾ ತಂಡ ಬಂಧಿಸಿದೆ. ಈತ ಕೊಲೆಗೆ ಸಂಚು ನಡೆಸಿದ್ದ ಆರೋಪಿಯಾಗಿದ್ದಾನೆ.

ಕೊಲೆಗೆ ಪೀತಾಂಬರನ್ ಪ್ರೇರಣೆ ನೀಡಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ. ಶ್ರೀನಿವಾಸ್ ತಿಳಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಈತನನ್ನು ಮತ್ತೆ ಕಸ್ಟಡಿಗೆ ಪಡೆಯಲಿದೆ. ಕಸ್ಟಡಿಯಲ್ಲಿರುವ ಉಳಿದ ಆರು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ.

ಕೆಲ ತಿಂಗಳ ಹಿಂದೆ ಸಿಪಿಎಂ-ಕಾಂಗ್ರೆಸ್ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಶರತ್ ಲಾಲ್ ಪೀತಾಂಬರನ್ ನ ಮೇಲೆ ಹಲ್ಲೆ ನಡೆಸಿದ್ದನೆನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಪೀತಾಂಬರನ್ ಸಂಚು ನಡೆಸಿದ್ದಾಗಿ ತನಿಖಾ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

ಹಂತಕರು ಕೃತ್ಯಕ್ಕೆ ಬಳಸಿದ್ದ ವಾಹನವೊಂದನ್ನು ಪೆರಿಯ ಪಾಕದ ನಿರ್ಜನ ಪ್ರದೇಶದಿಂದ ಪೊಲೀಸರು ಕಸ್ಟಡಿಗೆ ತೆಗದುಕೊಂಡಿದ್ದಾರೆ. ವಾಹನ ಮಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೃತ್ಯದಲ್ಲಿ ಮೂವರು ನೇರವಾಗಿ ಶಾಮೀಲಾಗಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಮೂವರು ಸೇರಿ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈದಿರಬಹುದು ತನಿಖಾ ತಂಡಕ್ಕೆ ಪ್ರಾಥಮಿಕವಾಗಿ ಸುಳಿವು ಲಭಿಸಿದೆ. ಘಟನೆ ನಡೆದ ಬಳಿಕ ಪರಿಸರದಿಂದ ಹಲವು ಸಿಪಿಎಂ ಕಾರ್ಯಕರ್ತರು ಪರಾರಿಯಾಗಿದ್ದು, ಇವರನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ.

ಆದಿತ್ಯವಾರ ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಇಬ್ಬರನ್ನು ಕೊಲೆಗೈಯ್ಯಲಾಗಿತ್ತು.

See also  ವಿರೋಧಿ ಅಲೆ ಎದುರಿಸಿ ಗೆಲ್ಲುತ್ತೇವೆ: ಆನಂದ ಅಸ್ನೋಟಿಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು