News Kannada
Monday, December 05 2022

ಕರ್ನಾಟಕ

ಕೈ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣ: ಘಟನಾ ಸ್ಥಳದಲ್ಲಿ ಆರೋಪಿಗಳ ವಿಚಾರಣೆ

Photo Credit :

ಕೈ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣ: ಘಟನಾ ಸ್ಥಳದಲ್ಲಿ ಆರೋಪಿಗಳ ವಿಚಾರಣೆ

ಕಾಸರಗೋಡು : ಯುವ ಕಾಂಗ್ರೆಸ್ ಕಾರ್ಯಕರ್ತ ರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿಯನ್ನು ಇಂದು ಮಧ್ಯಾಹ್ನ ಘಟನಾ ಸ್ಥಳಕ್ಕೆ ಕೊಂಡೊಯ್ದು ಮಾಹಿತಿಗಳನ್ನು ಕಲೆ ಹಾಕಿದ್ದು , ಘಟನಾ ಸ್ಥಳದ ಅಲ್ಪ ದೂರದ ನಿರ್ಜನ ಪ್ರದೇಶವೊಂದರ ರಬ್ಬರ್ ತೋಟದಲ್ಲಿನ ಪಾಲು ಬಾವಿಯಿಂದ ಕೃತ್ಯಕ್ಕೆ ಬಳಸಿದೆನ್ನಲಾದ ನಾಲ್ಕು ಕಬ್ಬಿಣದ ರಾಡ್ ಮತ್ತು ಒಂದು ತಲವಾರನ್ನು ಪತ್ತೆ ಹಚ್ಚಿದೆ .

ಮಧ್ಯಾಹ್ನ ವಿಶೇಷ ತನಿಖಾ ತಂಡ ವು ಆರೋಪಿಯಾಗಿರುವ ಎ. ಪೀತಾಂಬರನ್ ನನ್ನು ಪೆರಿಯ ಕಲ್ಯೊಟ್ ಗೆ ಕರೆದೊಯ್ದು ಮಾಹಿತಿ ಕಲೆ ಹಾಕಿತು . ಕೃತ್ಯದ ಬಳಿಕ ಮಾರಾಕಾಸ್ತ್ರವನ್ನು ಬಾವಿಗೆ ಎಸೆದು ಪರಾರಿಯಾಗಿದ್ದರು .

ಕೃತ್ಯ ನಡೆಸಿದ ಸ್ಥಳಕ್ಕೆ ಆರೋಪಿಯನ್ನು ಕರೆ ತರಲಾಗಿತ್ತಾದರೂ ಸ್ಥಳೀಯರು ಆರೋಪಿಯ ಮೇಲೆ ಹಲ್ಲೆ ಮುಂದಾಗಿದ್ದು ,ಇದರಿಂದ ಅಲ್ಲಿಂದ ಆರೋಪಿಯನ್ನು ಮಾರಕಾಸ್ತ್ರ ಬಚ್ಚಿಟ್ಟ ಸ್ಥಳಕ್ಕೆ ಕರೆದೊಯ್ದರು. ಆರೋಪಿಯನ್ನು ಸಂಜೆ ಹೊಸದುರ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು , ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಫೆಬ್ರವರಿ ೨೭ ರಂದು ಸಂಜೆ ೫ ಗಂಟೆಗೆ ನ್ಯಾಯಾಲಯಕ್ಕೆ ಮತ್ತೆ ಹಾಜರು ಪಡಿಸುವಂತೆ ನ್ಯಾಯಾಲಯ ತನಿಖಾ ತಂಡಕ್ಕೆ ಆದೇಶ ನೀಡಿದೆ . ಇನ್ನಷ್ಟು ಸಾಕ್ಷ್ಯಗಳು ಸಂಗ್ರಹಿಸಬೇಕಿದ್ದು, ಮಾತ್ರವಲ್ಲ ಹಲವು ಆರೋಪಿಗಳನ್ನು ಬಂಧಿಸಬೇಕಿದ್ದು , ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಒಪ್ಪಿಸುವಂತೆ ತನಿಖಾ ತಂಡ ನ್ಯಾಯಾಲಯಕ್ಕೆ ಮನವಿ ಮಾಡಿತ್ತು . ಇದರಂತೆ ಏಳು ದಿನಗಳ ಕಾಲ ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಿದೆ .

ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವ ತನಿಖಾ ತಂಡ ವಿಚಾರಣೆ ನಡೆಸುತ್ತಿದ್ದು , ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ .

 

See also  ಪರಿಸರವನ್ನು ಬೆಳೆಸಿ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು : ಸಚಿವ ಸಿ.ಟಿ ರವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು