News Kannada
Thursday, December 08 2022

ಕರ್ನಾಟಕ

ಮಹದೇಶ್ವರಬೆಟ್ಟದಲ್ಲಿ ನಾಲ್ವರು ಸತ್ಯಾಗ್ರಹನಿರತರು ಅಸ್ವಸ್ಥ

Photo Credit :

ಮಹದೇಶ್ವರಬೆಟ್ಟದಲ್ಲಿ ನಾಲ್ವರು ಸತ್ಯಾಗ್ರಹನಿರತರು ಅಸ್ವಸ್ಥ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರವನ್ನು ವಿರೋಧಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೆಯ ದಿನಕ್ಕೆ ಕಾಲಿಟ್ಟಿದ್ದು, ಐದು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣ ಮಾಡಲಾಗಿರುವ 93 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ವಿರೋಧಿಸಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಯಾರೂ ಸ್ಪಂದಿಸದ ಕಾರಣ ಅದು ಮುಂದುವರೆಯುತ್ತಲೇ ಇದೆ.

ಫೆ. 28ರ ಸಂಜೆ 6 ಗಂಟೆಯಿಂದ ಪ್ರತಿಭಟನೆ ಉಪವಾಸ ಸತ್ಯಾಗ್ರಹಕ್ಕೆ ತಿರುಗಿ ಶನಿವಾರ ಬೆಳಿಗ್ಗೆ ಇಬ್ಬರು ಮಹಿಳೆಯರಾದ ಗೀತಾ ಹಾಗೂ ನದಿಯಾ ಎಂಬುವವರು ಹಾಗೂ ಮಧ್ಯಾಹ್ನದ ನಂತರ ವೆಂಕಟ ಲಕ್ಷ್ಮಮ್ಮ, ರತ್ನ ಶಿವಮಾದಮ್ಮ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಲೆಮಹದೇಶ್ವರ ಕ್ಷೇತ್ರ ಅಭಿವೃಧ್ದಿ ಪ್ರಾಧಿಕಾರವು ನಮ್ಮ ಪ್ರತಿಭಟನೆಯನ್ನು ನೋಡಿಕೊಂಡೇ ತಿರುಗಾಡುತಿದ್ದರೂ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ತಲ ತಲಾಂತರದಿಂದಲೂ ನಾವು ಬೆಟ್ಟದಲ್ಲೇ ವಾಸವಿದ್ದು ಜೀವನವನ್ನು ಸಾಗಿಸಿಕೊಂಡು ಬರುತಿದ್ದೇವೆ. ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದ್ದು, ತೆರೆ ಮರೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಲಂಚವನ್ನು ಪಡೆಯುತ್ತ್ತಿರುವ ಶಂಕೆ ವ್ಯಕ್ತವಾಗಿದೆ. ಇಂದು ನಾವು ಸುಮಾರು 70 ಜನರು ಹಾಗೂ ಮಕ್ಕಳು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ಪ್ರತಿಭಟನೆ ಮುಂದುವರೆಯಲಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ

See also  ಜಿಲ್ಲಾಡಳಿತದ ಕ್ರಮದ ವಿರುದ್ಧ ಅಸಮಾಧಾನ : ಫೆ.14 ರಿಂದ ದಿಡ್ಡಳ್ಳಿ ಹೋರಾಟ ತೀವ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು