ಮಡಿಕೇರಿ: ಗುರುವಾರ ನಸುಕಿನಲ್ಲಿ ನಕ್ಸಲರು ಹಾಗೂ ಪೊಲೀಸರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ನಕ್ಸಲ್ ಜಲೀಲ್ ಎಂಬಾತನನ್ನು ವಯನಾಡು ಜಿಲ್ಲೆಯ ಅರಣ್ಯದಂಚಿನ ಉಪವನ ರೆಸಾರ್ಟ್ ನಲ್ಲಿ ಹತ್ಯೆ ಮಾಡಲಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರೆದಿದ್ದು ಉಳಿದವರ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.
ಈ ಹಿನ್ನೆಲೆ ಕರ್ನಾಟಕದ ಎಚ್.ಡಿ.ಕೋಟೆ ಹಾಗೂ ಕೊಡಗಿನ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬುಧವಾರ ರಾತ್ರಿ ಕೋಯಿಕೋಡ್-ಬೆಂಗಳೂರು ಹೆದ್ದಾರಿಯ ಲಕ್ಕಿಡಿ ಬಳಿಯ ರೆಸಾರ್ಟ್ ನಲ್ಲಿ 10ಕ್ಕೂ ಅಧಿಕ ಮಂದಿಯ ನಕ್ಸಲ್ ತಂಡವೊಂದು ಕಾಣಿಸಿಕೊಂಡಿದೆ. ರೆಸಾರ್ಟ್ ನಲ್ಲಿ ಊಟ ನೀಡುವಂತೆ ಬೆದರಿಕೆ ಹಾಕಿದ್ದಾರೆ. ರೆಸಾರ್ಟ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.