ನಾಪ್ಲೋಕು: ನೀರು ಕುಡಿಯಲು ಕೆರೆಗೆ ಇಳಿದ ಎರಡು ಮರಿ ಆನೆ ಹಾಗೂ ತಾಯಿ ಆನೆ ಮೇಲೆ ಬರಲು ಸಾಧ್ಯವಾಗದೇ ಪರದಾಡಿದ ಘಟನೆ ಚೇಲವಾರ ಗ್ರಾಮದಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ನೆರವಿನಿಂದ ಆನೆಗಳನ್ನು ರಕ್ಷಿಸಲಾಗಿದೆ.
ಈ ಆನೆಗಳು ಬುಧವಾರ ರಾತ್ರಿ ಕೆರೆಗೆ ಇಳಿದಿದ್ದು ಗುರುವಾರ ಬೆಳಗ್ಗೆ ಈ ವಿಷಯ ಸ್ಥಳೀಯರಿಗೆ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮುಖಾಂತರ ದಾರಿ ಮಾಡಿ ಆನೆಗಳನ್ನು ಹೊರ ಬರುವಂತೆ ಮಾಡಿ ಯಶಸ್ವಿಯಾಗಿದ್ದಾರೆ.