News Kannada
Monday, December 05 2022

ಕರ್ನಾಟಕ

ನಂಜನಗೂಡಲ್ಲಿ ಜಾನುವಾರು ಸಂತೆ ಸ್ಥಳ ಬದಲಾಣೆಗೆ ಆಕ್ರೋಶ

Photo Credit :

ನಂಜನಗೂಡಲ್ಲಿ ಜಾನುವಾರು ಸಂತೆ ಸ್ಥಳ ಬದಲಾಣೆಗೆ ಆಕ್ರೋಶ

ಮೈಸೂರು: ಲೋಕಸಭಾ ಚುನಾವಣೆಯ ಬಿಸಿ ನಂಜನಗೂಡು ಜಾನುವಾರುಗಳ ಸಂತೆಗೆ ತಟ್ಟಿದ್ದು, ಇದರಿಂದ ರೈತರು ಆಕ್ರೋಶಗೊಂಡಿದ್ದಾರೆ.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ನಂಜನಗೂಡಿನ ಸ್ವಾತಂತ್ರ್ಯ ಪೂರ್ವದ ಸಂತೆ ನಡೆಯುತ್ತಿದ್ದ ಜಾಗದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗೆ ತುರ್ತಾಗಿ ಭೂಮಿ ಪೂಜೆ ಮಾಡಿ ಕಾಮಗಾರಿ ಆರಂಭಿಸಿದ ಹಿನ್ನೆಲೆಯಲ್ಲಿ ಹಾಲಿ ಜಾಗದಲ್ಲಿ ನಡೆಯುತ್ತಿದ್ದ ಸಂತೆಯನ್ನು ಮಲ್ಲಯ್ಯನ ಮೂಲೆಯ ಬಳಿಯಿರುವ ಸರ್ಕಾರಿ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ರೈತರು ಬೀದಿಗಿಳಿದು ರಸ್ತೆತಡೆ ಮಾಡಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ ಹರೀಶ್ ಕುಮಾರ್ ರೈತರ ಅಹವಾಲು ಸ್ವೀಕರಿಸಿ ಹಳೆ ಜಾಗದಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಸ್ಥಗಿತ ಮಾಡಿಸುವಂತೆ ತಿಳಿಸಿದ್ದಾರೆ.

ನಂಜನಗೂಡು ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿರುವ ಜಾನುವಾರು ಸಂತೆಯ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಕನಿಷ್ಟ 7 ರಿಂದ 8 ವಾರಗಳ ಕಾಲ ಸಂತೆಯನ್ನ ನಂಜನಗೂಡಿನ ಮಲ್ಲನಮೂಲೆ ಮಠಕ್ಕೆ ಸ್ಥಳಾಂತರಿಸಿದ್ದರು. ಈಗ ಸದರಿ ಸ್ಥಳಕ್ಕೆ ಬೀಗ ಜಡಿದು ನೋಟೀಸ್ ಅಂಟಿಸಿದ್ದಾರೆ. ಪ್ರತಿ ಶುಕ್ರವಾರ ನಡೆಯುತ್ತಿದ್ದ ಸಂತೆಗೆ ಕಂಟಕ ಬಂದಿದೆ.

ರಾಸುಗಳ ಸಮೇತ ಬಂದ ರೈತರಿಗೆ ನೋಟೀಸ್ ಬೋರ್ಡ್ ಶಾಕ್ ಕೊಟ್ಟಿದೆ. ಅಲ್ಲದೆ ಮಲ್ಲನಮೂಲೆ ಮಠದ ಬಳಿ ನಾಗರಿಕ ಸೌಲಭ್ಯದ ಕೊರತೆ ಇದೆ ಎಂದು ಆರೋಪಿಸಿದ ರೈತರು ದಿಢೀರ್ ಪ್ರತಿಭಟನೆಗೆ ನಡೆಸಿದ್ದರಲ್ಲದೆ, ಹಿಂದೆ ನಡೆಯುತ್ತಿದ್ದ ಸ್ಥಳದಲ್ಲೇ ಸಂತೆ ನಡೆಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ರೈತರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಮುಂದಿನ ಶುಕ್ರವಾರದಿಂದ ರೈಲ್ವೇ ನಿಲ್ದಾಣದ ಮುಂಭಾಗದ ಸ್ಥಳದಲ್ಲೇ ಸಂತೆ ನಡೆಸಲು ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

See also  ಚಾಮರಾಜ ನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು