ಕಾರವಾರ: ಶೌಚಾಲಯ ಶುಚಿಗೊಳಿಸಲೆಂದು ಒಯ್ಯುತ್ತಿದ್ದ ಆ್ಯಸಿಡ್ ಚೆಲ್ಲಿ ಮೂವರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡವಾಡ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ನಡೆದಿದೆ.
ಗ್ರಾಮ ಪಂಚಾಯಿತಿಯೊಂದರ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಗಾರನಾಗಿದ್ದ ವ್ಯಕ್ತಿಯೊಬ್ಬ, ಸರ್ಕಾರಿ ಬಸ್ ನಲ್ಲಿ ಬಾಟಲಿಯಲ್ಲಿ ಆ್ಯಸಿಡ್ ಕೊಂಡೊಯ್ಯುತ್ತಿದ್ದ.
ಈ ವೇಳೆ ಅದು ಆಕಸ್ಮಾತ್ ಆಗಿ ಚೆಲ್ಲಿದೆ. ಘಟನೆಯಲ್ಲಿ ಆ್ಯಸಿಡ್ ಒಯ್ಯುತ್ತಿದ್ದ ವ್ಯಕ್ತಿ ಸಮೇತ ಮೂವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.