ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆ ಪಡೆದಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಪೌರಕಾರ್ಮಿಕರ ಪಾದ ತೊಳೆದ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದರು.
ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆದಿದ್ದರು.
ಮಂಜು ಅವರು ನಾಮಪತ್ರ ಸಲ್ಲಿಕೆ ಮೊದಲು ಬೃಹತ್ ರೋಡ್ ಶೋ ನಡೆಸಿದರು. ಈ ರೋಡ್ ಶೋದಲ್ಲಿ ಯಡಿಯೂರಪ್ಪ ಹಾಗೂ ಬಿಜೆಪಿಯ ಪ್ರಮುಖ ಮುಖಂಡರು ಭಾಗಿಯಾದರು.
ಪೌರ ಕಾರ್ಮಿಕರ ಮನೆಗೆ ತೆರಳಿ ಪಾದ ತೊಳೆಯುವ ಮೊದಲು ಗೋಪೂಜೆ ಸಲ್ಲಿಸಿದರು.