ಶಿವಮೊಗ್ಗ: ಪ್ರಚಾರದ ವೇಳೆ ಶಿವಮೊಗ್ಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಯುವಕರ ಜತೆ ಕಬಡ್ಡಿ ಆಟವಾಡಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಯುವಕರ ಅಚ್ಚುಮೆಚ್ಚಿನ ಆಟ.
ಶಿಕಾರಿಪುರದಲ್ಲಿ ಸಂಜೆ 6ಗಂಟೆಗೆ ಮಧುಬಂಗಾರಪ್ಪ ಪ್ರಚಾರ ಕೈಗೊಂಡ ವೇಳೆ ಸ್ಥಳೀಯ ಯುವಕರೆಲ್ಲ ಸೇರಿಕೊಂಡು ಕಬಡ್ಡಿ ಆಟವಾಡುತ್ತಿದ್ದರು. ಇದನ್ನು ನೋಡಿದ ಮಧು ಬಂಗಾರಪ್ಪ ಅವರು ಮೈದಾನಕ್ಕೆ ಇಳಿದು ಯುವಕರ ಜತೆ ಕಬಡ್ಡಿ ಆಟವಾಡಿ ಕೊನೆಗೆ ಫೋಟೋವೊಂದು ತೆಗೆಸಿ ಅಲ್ಲಿಂದ್ದ ತೆರಳಿದ್ದಾರೆ.
ಇದೀಗ ಕಬಡ್ಡಿ ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಮಧುಬಂಗಾರಪ್ಪ ಅವರ ಸರಳೆಯನ್ನು ಮೆಚ್ಚಿಕೊಂಡರೆ ಕೆಲವರು ಇದನ್ನು ಚುನಾವಣಾ ಗಿಮಿಕ್ ಎಂದು ಹೇಳುತ್ತಿದ್ದಾರೆ.