ಗುಂಡ್ಲುಪೇಟೆ: ಚುನಾವಣೆ ವೇಳೆ ದಾಖಲೆಗಳಿಲ್ಲದೆ ಅಕ್ರಮ ಹಣ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಪಟ್ಟಣದ 4 ನೇ ವಾರ್ಡ್ ನಿವಾಸಿ ಕಲೀಂ ಪಾಶಾ ಎಂಬುವರು ಯಾವುದೇ ದಾಖಲೆಯಿಲ್ಲದ 1 ಲಕ್ಷ 34 ಸಾವಿರದ 500 ರೂಪಾಯಿಯನ್ನು ಕೊಂಡೊಯ್ಯುವಾಗ ತಪಾಸಣೆ ನಡೆಸಿದ ಅಧಿಕಾರಿ ಕೃಷ್ಣಪ್ಪ ಹಣವನ್ನು ವಶಕ್ಕೆ ಪಡೆದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.