ವಿಜಯಪುರ: ಗೃಹ ಸಚಿವ ಎಂ.ಬಿ. ಪಾಟೀಲ್ ಬೆಂಬಲಿಗರು ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್. ಪಾಟೀಲ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಒಳನುಗ್ಗಿ ಹಲ್ಲೆಗೆ ಯತ್ನಿಸಿದರು.
ಪತ್ರಿಕಾಗೋಷ್ಠಿ ನಡೆಸಿದ ವೇಳೆ ಒಣನುಗ್ಗಿದ ಗುಂಪು ನೇರವಾಗಿ ಶಾಸಕ ನಡಹಳ್ಳಿಯತ್ತ ತೆರಳಿ ಹಲ್ಲೆ ನಡೆಸಿದೆ. ಈ ವೆಳೆ ದಾಂಧಲೆ ಹಾಗೂ ಉದ್ವಿಗ್ನತೆ ಉಂಟಾಯಿತು.
ಪತ್ರಿಕಾಗೋಷ್ಠಿಯಲ್ಲಿ ನಡೆಸುತ್ತಿದ್ದ ಜನರನ್ನು ಡಿವೈಎಸ್ ಪಿ ಡಿ. ಅಶೋಕ್ ನೇತೃತ್ವದ ತಂಡವು ಚದುರಿಸಿತು. ಇದರ ಬಳಿಕ ನಡಹಳ್ಳಿ ಪತ್ರಿಕಾಗೋಷ್ಠಿಯನ್ನು ಮುಂದುವರಿಸಿದರು.
ಗೃಹ ಸಚಿವರ ತಮ್ಮ ಬೆಂಬಲಿಗರ ಮೂಲಕ ಗೂಂಡಾಗಿರಿ ನಡೆಸಿರುವರು. ನನ್ನ ಜೀವ ತೆಗೆಯುವ ಆದೇಶ ತಮ್ಮ ಬೆಂಬಲಿಗರಿಗೆ ಎಂ.ಬಿ.ಪಾಟೀಲ್ ನೀಡಿದ್ದರೇ ಎಂದು ಅವರು ಪ್ರಶ್ನಿಸಿದರು.