News Kannada
Wednesday, December 07 2022

ಕರ್ನಾಟಕ

ಬೆಳೆಗಾರರ ಹಿತಕಾಯುವಲ್ಲಿ ಪ್ರತಾಪಸಿಂಹ ವಿಫಲ: ಕಾಂಗ್ರೆಸ್ ಆರೋಪ

Photo Credit :

ಬೆಳೆಗಾರರ ಹಿತಕಾಯುವಲ್ಲಿ ಪ್ರತಾಪಸಿಂಹ ವಿಫಲ: ಕಾಂಗ್ರೆಸ್ ಆರೋಪ

ಮಡಿಕೇರಿ: ಬೆಳೆಗಾರರ ಹಿತ ಕಾಯಲು ಸಂಸದರನ್ನು ಸಾಂಬಾರ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ. ಆದರೆ ಸದಸ್ಯರಾಗಿದ್ದ ಪ್ರತಾಪ ಸಿಂಹ ಅವರು ಬೆಳೆಗಾರರ ಹಿತ ಕಾಯದೆ ತನ್ನ ಸ್ವಂತ ವ್ಯವಹಾರವನ್ನು ಅಭಿವೃದ್ಧಿ ಪಡಿಸಿಕೊಂಡರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಕಾಲ ಲೋಕಸಭಾ ಸದಸ್ಯ ಸ್ಥಾನದಲ್ಲಿದ್ದ ಪ್ರತಾಪಸಿಂಹ ಅವರು ಮನಸ್ಸು ಮಾಡಿದ್ದರೆ ಕಾಳುಮೆಣಸು ಆಮದಿನಿಂದ ಆಗಿದ್ದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿತ್ತು. ಆದರೆ ಕಾಳುಮೆಣಸು ವ್ಯವಹಾರದಲ್ಲಿ ತೊಡಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪುತ್ರನೊಂದಿಗೆ ಇವರು ಕೂಡ ಶಾಮೀಲಾದರು. ಇದೇ ಕಾರಣಕ್ಕೆ ಕೊಡಗಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಯಿತು ಎಂದು ಆರೋಪಿಸಿದರು.

ಕಾಫಿ ಮತ್ತು ಕಾಳುಮೆಣಸಿನ ಬೆಲೆ ಕುಸಿದು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಳೆಗಾರರು ಹಾಗೂ ರೈತರು ಸ್ವಾಭಿಮಾನವಿದ್ದರೆ ಪ್ರತಾಪ ಸಿಂಹ ಅವರಿಗೆ ಮತ ಹಾಕುವುದಿಲ್ಲವೆಂದು ಅಭಿಪ್ರಾಯಪಟ್ಟರು. ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲು ನಿಷ್ಕ್ರೀಯರಾಗಿದ್ದ ಪ್ರತಾಪ ಸಿಂಹರಿಂದಾಗಿ ಇದೀಗ ವರದಿ ಅನುಷ್ಠಾನದ ಹಂತದಲ್ಲಿದೆ. ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ವರದಿ ಅನುಷ್ಠಾನಗೊಂಡು ಕೊಡಗಿನ ಜನ ಮತ್ತಷ್ಟು ಸಂಕಷ್ಟವನ್ನು ಎದುರಿಸಲಿದ್ದಾರೆ ಎಂದು ದೂರಿದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ಮಾಡದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸಗಳನ್ನೆ ಮಾಡಿದೆ ಎಂದು ಆರೋಪಿಸಿದರು. ಯುಪಿಎ ಸರ್ಕಾರ ಇದ್ದಾಗ ರೈತರ 72 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಿತ್ತು. ಇದೀಗ ರಾಜ್ಯದ ಮೈತ್ರಿ ಸರ್ಕಾರ ಕೂಡ ತಲಾ 1 ಲಕ್ಷ ರೂ. ಸಾಲ ಮನ್ನಾ ಮಾಡಿದೆ. ಆದರೆ, ಕೇಂದ್ರ ಸರ್ಕಾರ ರೈತರ ಮತ್ತು ಕಾಫಿ ಬೆಳೆಗಾರರ ನೆರವಿಗೆ ಬಂದಿಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಸಂಕಷ್ಟ ಎದುರಾದರು ಮತ್ತು ಕಾಫಿ ಕರಿಮೆಣಸು ಬೆಲೆ ಕುಸಿತಗೊಂಡರೂ ಸಮಸ್ಯೆಗೆ ಸ್ಪಂದಿಸುವ ಕಾಳಜಿಯನ್ನು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರತಾಪಸಿಂಹ ತೋರಿಲ್ಲ ಎಂದು ಮಂಜುನಾಥ್ ಕುಮಾರ್ ಟೀಕಿಸಿದರು.

See also  ಊಟ ಮಾಡಲಿ ಇಲ್ಲ ಉಪವಾಸ ಕೂರಲಿ ಮೇಕೆದಾಟು ಯೋಜನೆ ಮಾಡುತ್ತೇವೆ ; ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು