News Kannada
Thursday, December 01 2022

ಕರ್ನಾಟಕ

ಸಾಂಪ್ರದಾಯಿಕ ಉಡುಗೆಯೊಂದಿಗೆ ಮತಚಲಾಯಿಸಿದ ಸೋಲಿಗರು - 1 min read

Photo Credit :

ಸಾಂಪ್ರದಾಯಿಕ ಉಡುಗೆಯೊಂದಿಗೆ ಮತಚಲಾಯಿಸಿದ  ಸೋಲಿಗರು

ಯಳಂದೂರು: ಚಾಮರಾಜನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತೀ ಹೆಚ್ಚು ಬುಡಕಟ್ಟು ಸಮುದಾಯದವರನ್ನು ಹೊಂದಿದ್ದು, ಇವರು ತಮ್ಮ ವ್ಯಾಪ್ತಿಯಲ್ಲಿಯೇ ಮತಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆ ಸ್ಥಾಪಿಸಿದ್ದರಿಂದ ಬುಡಗಟ್ಟು ಸಮುದಾಯದವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಡೋಲು ಬಡಿಯುತ್ತಾ ಆಗಮಿಸಿದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36 ಸಾವಿರ ಸೋಲಿಗರು ಕಾಡುಕುರುಬ ಜೇನುಕುರುಬ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು, 23 ಸಾವಿರ ಮಂದಿ ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕೆ.ಗುಡಿ ಆಶ್ರಮಶಾಲೆಯಲ್ಲಿ 127 ಸಂಖ್ಯೆ ಮತಗಟ್ಟೆಯನ್ನು ಸ್ಥಾಪಿಸಿದ್ದು, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಪುರಾಣಿ ಪೋಡುವಿನಲ್ಲಿ 197 ಸಂಖ್ಯೆಯ ಮತಗಟ್ಟೆಯನ್ನು ಸ್ಥಾಪಿಸಿದ್ದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮದ್ದೂರು ಕಾಲೋನಿ ಗಿರಿಜನ ಆಶ್ರಮ ಶಾಲೆಯಲ್ಲಿ 180 ಸಂಖ್ಯೆಯ ಮತಗಟ್ಟೆಯನ್ನು ಸ್ಥಾಪಿಸಿದ್ದು, ಹನೂರು ವಿಧಾನಸಭಾ ಕ್ಷೇತ್ರದ ಕೋಣನಕೆರೆ ಗಿರಿಜನ ಆಶ್ರಮ ಶಾಲೆಯಲ್ಲಿ 152 ಸಂಖ್ಯೆಯ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಈ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಮತ ಕೇಂದ್ರಕ್ಕೆ ಸೋಲಿಗರು ಕಾಡುಕುರುಬರು ಜೇನುಕುರುಬರ ತಮ್ಮದೇ ಸಂಪ್ರದಾಯಿಕ ಉಡುಗೆಯನ್ನು ತೊಟ್ಟು ಬಂದಿದ್ದು ವಿಶೇಷವಾಗಿತ್ತು. ಅಲ್ಲದೆ ಈ ಮತಗಟ್ಟೆಗಳನ್ನು ತಳಿರು ತೋರಣಗಳಿಂದ ಸಾಂಸ್ಕೃತಿಕ ಮತಗಟ್ಟೆಗಳನ್ನು ಚಪ್ಪರದಿಂದ ಶೃಂಗರಿಸಿದ್ದು ಗಮನಸೆಳೆಯುವಂತಿತ್ತು. ಮತದಾನ ಕೇಂದ್ರಕ್ಕೆ ಬಂದ ಬುಡಗಟ್ಟು ಸಮುದಾಯದ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಗಿರಜನರನ್ನು ಪ್ರೋತ್ಸಾಯಿಸಲು ಕೆಲವು ಮಹಿಳೆಯರು ಅವರ ಕೈಗಳ ಮೇಲೆ ಮೆಹಂದಿ ಹಚ್ಚಿ ಸ್ವಾಗತ ಕೋರಿದರು.

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಶೇ.49ರಷ್ಟು ಅರಣ್ಯ ಪ್ರದೇಶನ್ನು ಶೇ.51ರಷ್ಟು ಬಯಲು ಸೀಮೆಯನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಸೇರಿದಂತೆ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಮಲೈಮಹಾದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯ ಜೀವಿ ಧಾಮ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ. ದೇಶದಲ್ಲಿಯೇ ಅತೀ ಹೆಚ್ಚು ಆನೆ ಹಾಗೂ ಹುಲಿಗಳನ್ನು ಹೊಂದಿರುವ ಜಿಲ್ಲೆಯೆಂಬ ಹೆಗ್ಗಳಿಕೆ ಚಾಮರಾಜನಗರಕ್ಕಿದೆ.

ಇಂತಹ ಚಾಮರಾಜನಗರ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಒಗ್ಗೂಡಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವಾಗಿ 1962ರ ಈಚೆಗೆ ರೂಪುಗೊಂಡಿದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಟೀ.ನರಸೀಪುರ, ನಂಜನಗೂಡು, ಹೆಗ್ಗಡದೇವನಕೋಟೆ, ವರುಣಾ, ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಮತದಾರರ ಅಂತಿಮ ಪಟ್ಟಿಯಲ್ಲಿ ಈವರೆಗೆ 8 ಲಕ್ಷದ 42 ಸಾವಿರದ 872 ಪುರುಷರು 8ಲಕ್ಷದ 43 ಸಾವಿರದ 379 ಮಹಿಳೆಯರು ಹಾಗೂ 113 ತೃತೀಯ ಲಿಂಗಿಯ ಮತದಾರರಿದ್ದಾರೆ.

See also  ಕೊಡಗಿನಲ್ಲಿ ಎಡೆಬಿಡದ ಮಳೆ: ಮಡಿಕೇರಿಯಲ್ಲಿ ದಟ್ಟ ಮಂಜು, ಮೈಕೊರೆಯುವ ಚಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು