News Kannada
Friday, December 02 2022

ಕರ್ನಾಟಕ

ಉ.ಕ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯ ನಡುವೆ ಮೈತ್ರಿಗಳಿಂದ ಹಗ್ಗಜಗ್ಗಾಟ

Photo Credit :

ಉ.ಕ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯ ನಡುವೆ ಮೈತ್ರಿಗಳಿಂದ ಹಗ್ಗಜಗ್ಗಾಟ

ಕಾರವಾರ: ಏ.೨೩ರಂದು ನಡೆಯಲಿರುವ ಎರಡನೇ ಹಂತದ ಮತದಾನ ನಡೆಯಲಿದ್ದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟೂ ೧೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಮುಖ್ಯವಾಗಿ ಬಿಜೆಪಿಯ ಅನಂತಕುಮಾರ್ ಹೆಗಡೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು ಉಕ.ಲೋಕಸಭಾ ಕ್ಷೇತ್ರದ ೧೫.೫೨ ಲಕ್ಷ ಮತದಾರರು ಭವಿಷ್ಯ ನಿರ್ಧರಿಸಲಿದ್ದಾರೆ.

ಕಳೆದ ಆರು ಚುನಾವಣೆಯ ಪೈಕಿ ಐದು ಬಾರಿ ಗೆದ್ದಿರುವ ಅನಂತಕುಮಾರ್ ಹೆಗಡೆ ಅವರನ್ನು ಈ ಬಾರಿ ಸೋಲಿಸಬೇಕು ಎಂದು ಮೈತ್ರಿಗಳಿಂದ ಸಾಕಷ್ಟು ಯತ್ನಗಳು ನಡೆದಿದೆ. ಆದರೆ ಕೆಲವು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿ ವಿರುದ್ಧ ಅಪಸ್ವರಗಳಿದ್ದರೇ, ಅನಂತಕುಮಾರ್ ಜಿಲ್ಲೆಯ ಅಭಿವೃದ್ಧಿ ಶ್ರಮಿಸಿಲ್ಲ ಎನ್ನುವ ಧ್ವನಿಗಳಿವೆ.

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ನಡುವೆ ಅನಂತಕುಮಾರ್ ಮೋದಿಯ ಜಪ ಮಾಡಿದ್ದರೇ, ಆಸ್ನೋಟಿಕರ್ ಅನಂತಕುಮಾರ್ ವಿರುದ್ಧವೇ ಭಾಷಣಗಳನ್ನು ಮಾಡುತ್ತ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ ಜಿಲ್ಲೆಯ ಹಿಂದುಳಿದ ವರ್ಗಗಳ ಮತಗಳನ್ನು ಪಡೆಯುವ ದೃಷ್ಟಿಯಿಂದ ಆನಂತ ಸಾಕಷ್ಟು ಯತ್ನಗಳನ್ನು ನಡೆಸಿದ್ದಾರೆ.

ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿದು, ಮೈತ್ರಿ ಪಕ್ಷದ ಅಭ್ಯರ್ಥಿ ಆನಂತ ಅಸ್ನೋಟಿಕರ್ಗೆ ಅವಕಾಶ ನೀಡಲಾಗಿದ್ದರಿಂದ ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಇದೇ ಮೊದಲ ಬಾರಿ ಕಾಂಗ್ರೆಸ್ ಚಿನ್ನೆ ಇಲ್ಲದೆ ಸ್ಪರ್ಧೆ ನಡೆಯುತ್ತಿದೆ. ಈ ಸಂಗತಿಯೂ ಜಿಲ್ಲೆ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಅಸ್ನೋಟಿಕರ್ ಮೊದಲ ಬಾರಿ ಕಾರವಾರ-ಅಂಕೋಲಾ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಜೆಪಿಯ ಆಪರೇಷನ್ ಕಮಲದಲ್ಲಿ ಸೇರ್ಪಡೆಯಾಗಿ ಮಂತ್ರಿಪಟ್ಟ ಪಡೆದು ಅಧಿಕಾರ ನಡೆಸಿದರು. ನಂತರ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತಿದ್ದ ಆನಂದ ಜೆಡಿಎಸ್ನವರು ಮೈತ್ರಿ ಅಭ್ಯರ್ಥಿಹೊಂದಾಣಿಕೆಯಲ್ಲಿ ಜಿಲ್ಲೆಗೆ ಜೆಡಿಎಸ್ ಸ್ಥಾನ ನೀಡಿದ್ದರಿಂದ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ಈ ಮೈತ್ರಿಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ಸಿನ ಅನೇಕ ನಾಯಕರು ಆನಂದ ಪರ ಮತಯಾಚಿಸಲು ಹಿಂದೆಟು ಹಾಕಿದ್ದರು. ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಮುಖಂಡರಿಗೆ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರಿಂದ ತೋರ್ಪಡಿಕೆಗೆ ಜಿಲ್ಲೆಯ ಕೆಲ ತಾಲೂಕಿನಲ್ಲಿಪ್ರಚಾರ ಮಾಡಿದ್ದಾರೆ. ಅಲ್ಲದೆ ಈವರೆಗೆ ಜಿಲ್ಲೆಯಲ್ಲಿ ಆನಂದ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಎಚ್. ಡಿ. ಕುಮಾರ್ ಸ್ವಾಮಿ, ಮಾಜಿ ಪ್ರಧಾನ ಎಚ್. ಡಿ. ದೇವೆಗೌಡ,ಬಸವರಾಜ್ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಪ್ರಚಾರ ನಡೆಸಿದ್ದಾರೆ.

ಮೋದಿ ಅಲೆ: ಜಿಲ್ಲೆಯಲ್ಲಿ ಪ್ರಚಾರ ನಡೆಸಿರುವ ಬಿಜೆಪಿಗರು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆಯನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದಾರೆ. ಕಳೆದ೨೫ ವರ್ಷ ಪೂರ್ವದಿಂದ ಜಿಲ್ಲೆಯಲ್ಲಿ ಅನಂತಕುಮಾರ್ ಹೆಗಡೆ ಸಂಸದರಾಗಿ, ಕಳೆದ ಒಂದುವರೆ ವರ್ಷದಿಂದ ಕೇಂದ್ರ ಸಚಿವರಾಗಿ ಆಡಳಿತ ನಡೆಸಿದ್ದರೂ ಸಹ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎನ್ನುವ ಆರೋಪವಿದೆ. ಪ್ರತಿ ಚುನಾವಣೆಯ ಸಂಬಂರ್ಧದಲ್ಲಿ ಯಾವುದಾದರೂ ಒಂದು ಅಲೆಯನ್ನೇ ತನ್ನ ಬಂಡವಾಳವಾಗಿಟ್ಟುಕೊಂಡು ಗೆಲುವು ಸಾಧಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯನ್ನೇ ಅಸ್ತ್ರವಾಗಿಟ್ಟುಕೊಂಡು ತನಗೆ ಮತ ನೀಡುವುದು ಬೇಡ ಮೋದಿಗೆ ಮತ ನೀಡಿ ಎಂದು ಕಾಂಗ್ರೆಸ್ವಿರುದ್ಧ ೧.೫೦ ಲಕ್ಷ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.

See also  ಅಯ್ಯನಕೆರೆ ಪ್ರವಾಸಿ ತಾಣವಾಗಿಸಲು ಕ್ರಮ ವಹಿಸಿ: ಸಚಿವ ಸಿ.ಟಿ. ರವಿ

ಈ ಚುನಾವಣೆಯಲ್ಲೂ ಅನಂತಕುಮಾರ್ ಅದೇ ದಾಟಿಯಲ್ಲಿ ಪ್ರಚಾರ ನಡೆಸಿದ್ದು, ಐದು ವರ್ಷ ಆಡಳಿತ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮತ ನೀಡಿನವಭಾರತ ನಿರ್ಮಾಣಕ್ಕೆ ಮತ ಚಲಾಯಿಸಿ ಎನ್ನುತ್ತಿದ್ದಾರೆ. ಈ ನಡುವೆ ಎಲ್ಲೂ ತಾವು ಮಾಡಿದ ಜಿಲ್ಲೆಯ ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿಲ್ಲಎನ್ನುವುದು ವಿರೋಧಿ ಪಕ್ಷದವರು ನೇರ ಆರೋಪ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟೂ ಮತದಾರರು: ಜಿಲ್ಲೆಯ ಆರು ಕ್ಷೇತ್ರಗಳು ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಸೇರಿ ಒಟ್ಟೂ ೧೫,೫೨,೫೪೪ ಮತದಾರರಿದ್ದಾರೆ. ಕಾರವಾರ-೨,೧೮,೫೫೮, ಕುಮಟಾ-೧,೮೨,೨೯೫ಮ ಭಟ್ಕಳ-೨,೧೫,೪೪೭, ಶಿರಸಿ-೧,೯೩,೦೮೭, ಯಲ್ಲಾಪುರ-೧,೭೨,೬೩೫, ಹಳಿಯಾಳ-೧,೭೩.೧೪೯, ಖಾನಾಪುರ- ೨,೦೭,೬೫೪
ಕಿತ್ತೂರು-೧,೮೯,೭೧೯ ಮತಗಳಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು