News Kannada
Friday, December 09 2022

ಕರ್ನಾಟಕ

ರಾಜ್ ಅಭಿಮಾನಿಗಳಿಂದ ಗಾಜನೂರಿನಿಂದ ನೇತ್ರದಾನ ಅಭಿಯಾನ

Photo Credit :

ರಾಜ್ ಅಭಿಮಾನಿಗಳಿಂದ ಗಾಜನೂರಿನಿಂದ ನೇತ್ರದಾನ ಅಭಿಯಾನ

ಚಾಮರಾಜನಗರ: ವರನಟ ಡಾ. ರಾಜಕುಮಾರ್ ಅವರ 90ನೇ ಜಯಂತಿ ಅಂಗವಾಗಿ ಅವರ ಜನ್ಮಭೂಮಿ ಗಾಜನೂರಿನಿಂದ 90 ಮಂದಿ ಬೆಂಗಳೂರಿನ ಡಾ. ರಾಜ್ ಅಭಿಮಾನಿಗಳು ನೇತ್ರದಾನ ಮಾಡುವ ಅರ್ಜಿಗೆ ಸಹಿ ಹಾಕಿ, ಡಾ. ರಾಜ್ ಜನ್ಮಭೂಮಿಯಿಂದ ಬೆಂಗಳೂರಿನ ಕರ್ಮಭೂಮಿಯವರೆಗೆ ನೇತ್ರದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಮುತ್ತುರಾಜು ಅಭಿಮಾನಿ ಬಳಗ ಹಾಗೂ ವಿಶ್ವ ಮಾನವ ಡಾ. ರಾಜಕುಮಾರ್ ಸೇವಾ ಸಮಿತಿ ಪದಾಧಿಕಾರಿಗಳು ಬೆಂಗಳೂರಿನಿಂದ 100ಕ್ಕೂ ಹೆಚ್ಚು ಮಂದಿ ಬಸ್‍ನಲ್ಲಿ ಗಾಜನೂರಿಗೆ ಆಗಮಿಸಿ, ಡಾ.ರಾಜ್ ಅವರು ಜನ್ಮ ನೀಡಿದ ಗಾಜನೂರಿನ ಮನೆಯ ಮುಂದೆ ನೇತ್ರದಾನ ಮಾಡುವ ಸಂಕಲ್ಪ ಮಾಡಿ, ಜೈಕಾರ ಕೂಗಿದರು.

ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ತಾಳವಾಡಿ ಸಮೀಪದ ಗಾಜನೂರಿಗೆ ಆಗಮಿಸಿದ ಅಭಿಮಾನಿಗಳು ಡಾ. ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅವರ ತಂದೆ, ತಾಯಿ ಭಾವಚಿತ್ರ ಮತ್ತು ರಾಜಕುಮಾರ್ ಅವರ ವಿಭಿನ್ನ ಭಾವಚಿತ್ರಗಳ ಮುಂದೆ ನಿಂತು ಸೆಲ್ಪಿ ತೆಗೆದುಕೊಂಡರು. ನಂತರ ಅವರು ಓಡಾಡಿದ ಜಾಗದಲ್ಲಿ ಕುಳಿತು ನಮ್ಮ ಜನ್ಮ ಪಾವನವಾಯಿತು ಎಂದು ಉದ್ಘರಿಸಿದರು. ಅಲ್ಲದೇ, ವೀರಪ್ಪನ್ ರಾಜ್ ಅವರನ್ನು ಅಪಹರಿಸಿದ ಜಾಗ ಮತ್ತು ಕರೆದುಕೊಂಡು ಹೋದ ಮಾರ್ಗದ ಬಗ್ಗೆ ಅಲ್ಲಿದ್ದ ಕುಟುಂಬಸ್ಥರಿಂದ ಕೇಳಿ ತಿಳಿದು ಭಾವುಕರಾದರು.

ಡಾ. ರಾಜ್ ಮನೆಯಲ್ಲಿದ್ದ ಅವರ ಸಹೋದರಿ ನಾಗಮ್ಮ, ರಾಜ್ ಸಂಬಂಧಿ ಗೋಪಾಲ್ ಮತ್ತು ಅವರ ಪತ್ನಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿದರು. ಡಾ. ರಾಜ್ ಅವರ ತಂಗಿ ನಾಗಮ್ಮ ಅವರಿಂದ ಆಶೀರ್ವಾದ ಪಡೆದುಕೊಂಡರು. ಬಳಿಕ ಗಾಜನೂರಿನಲ್ಲಿ ಮಧ್ಯಭಾಗದಲ್ಲಿರುವ ಡಾ. ರಾಜ್ ಹುಟ್ಟಿ ಬೆಳೆದ ನಾಡಂಚಿನ ಮನೆಗೆ ತೆರಳಿ ಮನೆಯೊಳಗೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುತ್ತುರಾಜ್ ಅಭಿಮಾನಿ ಬಳಗದ ಅಧ್ಯಕ್ಷ ನವೀನ್‍ಕುಮಾರ್, ಡಾ.ರಾಜ್‍ಕುಮಾರ್ ಕೇವಲ ಒಬ್ಬ ಕಲಾವಿದರಲ್ಲ. ಅವರು ನಮ್ಮೆಲ್ಲರ ಆರಾಧ್ಯ ದೇವರು, ಅವರು ಕನ್ನಡ ನಾಡು ನುಡಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂಥ ಮಹಾನ್ ನಟ ಹುಟ್ಟಿದ ಜನ್ಮಭೂಮಿಯನ್ನು ಸ್ಪರ್ಶಿಸಬೇಕು ಎಂಬ ಅಭಿಲಾಷೆ ನಮ್ಮದಾಗಿತ್ತು. ಹೀಗಾಗಿ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 90 ಮಂದಿ ನೇತ್ರದಾನ ಮಾಡುವ ಸಂಕಲ್ಪದೊಂದಿಗೆ ಗಾಜನೂರಿನಿಂದ ಜಾಗೃತಿ ಅಭಿಯಾನ ಆರಂಭಿಸಿದ್ದೇವೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಡಾ. ರಾಜ್ ಅವರ ಹೆಸರಿನಲ್ಲಿ ನೇತ್ರದಾನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಡಾ.ರಾಜ್‍ಕುಮಾರ್ ಅಭಿಮಾನಿ ಚಾಮುಲ್ ರಾಘವೇಂದ್ರ ರಾವ್ ಮಾತನಾಡಿ, ಡಾ. ರಾಜ್‍ಕುಮಾರ್ ಹೆಸರೇಳಿದರೆ ಒಂದು ರೀತಿಯ ರೋಮಾಂಚನವಾಗುತ್ತದೆ. ಇನ್ನು ಅವರ ಹುಟ್ಟೂರು ಗಾಜನೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ನವೀನ್‍ಕುಮಾರ್, ಸೇವಾ ಸಮಿತಿ ಅಧ್ಯಕ್ಷ ಬ.ನಂ.ಮ.ರಾಜು ರಾಘವೇಂದ್ರ ರಾವ್, ಸೇತುರಾಮು, ಭಾರತಿ, ಟಿ.ಎಂ. ಗೌಡ, ವೆಂಕಟರೆಡ್ಡಿ, ಪರಂಗುಬ್ಬಿ, ಪಾಳ್ಯ ಸಿದ್ದಪ್ಪಾಜಿ, ರಾಜಣ್ಣ, ಅಪ್ಪು ಬ್ರಿಗೇಡ್ ಮಣಿಕಂಠ, ಬಾಲಾಜಿ ಮೊದಲಾದವರು ಇದ್ದರು.

See also  ಚುನಾವಣಾ ಪ್ರಚಾರದಲ್ಲಿ ಹಾಲು ಕರೆದ ನಟ ದರ್ಶನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು