News Kannada
Friday, December 02 2022

ಕರ್ನಾಟಕ

ತಂಬಾಕು ಬೆಳೆಯಿಂದ ನಷ್ಟ: ರೈತ ಆತ್ಮಹತ್ಯೆ

Photo Credit :

ತಂಬಾಕು ಬೆಳೆಯಿಂದ ನಷ್ಟ: ರೈತ ಆತ್ಮಹತ್ಯೆ

ಸರಗೂರು: ತಂಬಾಕು ಬೆಳೆಯಲು ಸಾಲ ಮಾಡಿದ ರೈತ ಅದನ್ನು ತೀರಿಸಲಾಗದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸರಗೂರು ತಾಲೂಕಿನ ಹಂಚಿಪುರ ಗ್ರಾಮದಲ್ಲಿ ನಡೆದಿದೆ.

ಹಂಚಿಪುರ ಗ್ರಾಮದ ನಿವಾಸಿ ಎಚ್.ವಿ.ರಾಜಪ್ಪ(55) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಹಂಚಿಪುರ ಗ್ರಾಮದಲ್ಲಿ ಮೂರು ಎಕರೆ ಜಮೀನು ಹೊಂದಿದ್ದು, ಇದರಲ್ಲಿ ತಂಬಾಕು ಬೆಳೆಬೆಳೆಯುವ ನಿರ್ಧಾರ ಮಾಡಿ ಅದಕ್ಕಾಗಿ ಎಸ್‍ಬಿಎಂ ಬ್ಯಾಂಕ್‍ನಿಂದ 8 ಲಕ್ಷ ರೂ. ಹಾಗೂ ವಿವಿಧೆಡೆಗಳಿಂದ 3 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು.

ತಂಬಾಕು ಬೆಳೆದರಾದರೂ ಅವರು ನಿರೀಕ್ಷೆ ಮಾಡಿದಂತೆ ಫಸಲಾಗಲೀ, ಅದಕ್ಕೆ ಬೆಲೆಯಾಗಲೀ ಸಿಗಲಿಲ್ಲ. ಇದರಿಂದ ಮಾಡಿದ ಸಾಲವನ್ನು ತೀರಿಸಲಾಗದೆ ಪರದಾಡುವಂತಾಗಿತ್ತು.

ಈ ನಡುವೆ ಸಾಲಗಾರರ ಕಾಟವೂ ಹೆಚ್ಚಾಗಿತ್ತಲ್ಲದೆ, ಕೈ ಸಾಲ ನೀಡಿದವರು ಸಾಲ ವಾಪಾಸ್ ನೀಡುವಂತೆ ಒತ್ತಾಯ ಮಾಡತೊಡಗಿದ್ದರು. ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಭಯಗೊಂಡ ರಾಜಪ್ಪ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಅರೆಭಾಷೆ ಗೌಡ ಜನಾಂಗ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು: ಕೆ.ಜಿ.ಬೋಪಯ್ಯ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು