News Kannada
Sunday, November 27 2022

ಕರ್ನಾಟಕ

ಮತದಾನಕ್ಕೆ ಕಾಸರಗೋಡು ಸಂಪೂರ್ಣ ಸಜ್ಜು - 1 min read

Photo Credit :

ಮತದಾನಕ್ಕೆ ಕಾಸರಗೋಡು ಸಂಪೂರ್ಣ ಸಜ್ಜು

ಕಾಸರಗೋಡು: ಲೋಕಸಭಾ ಚುನಾವಣೆಗೆ ಕಾಸರಗೋಡು ಸಜ್ಜಾಗಿದ್ದು , ನಾಳೆ ( ೨೩) ನಡೆಯಲಿರುವ ಮತದಾನದಲ್ಲಿ ೧೦,೧೧,೦೩೧  ಮಂದಿ  ತಮ್ಮ ಹಕ್ಕು ಚಲಾಯಿಸುವರು. 

ಮತದಾನಕ್ಕಾಗಿ ಮತಗಟ್ಟೆಗಳು ಸಜ್ಜಾಗಿದ್ದು , ಜಿಲ್ಲೆಯ ೯೬೮ ಮತಗಟ್ಟೆಗಳಿಗಿರುವ  ಸಾಮಗ್ರಿ ಗಳ ವಿತರಣೆ ಇಂದು ನಡೆಯಿತು. 

ಕಾಸರಗೋಡು ಸರಕಾರಿ ಕಾಲೇಜು ,  ಪಡನ್ನ ಕ್ಕಾಡ್ ನೆಹರೂ  ಕಾಲೇಜು ಗಳಲ್ಲಿ ಮತಗಟ್ಟೆಗಳ ಸಾಮಾಗ್ರಿ ವಿತರಣೆ  ನಡೆದಿದ್ದು , ಮತಗಟ್ಟೆಗೆ ನೇಮಕಗೊಂಡಿರುವ ಸಿಬಂದಿ ಮತಗಟ್ಟೆಗೆ ತಲಪಿಸಿದರು .

ನಾಳೆ ಬೆಳಿಗ್ಗೆ ೭ ರಿಂದ ಸಂಜೆ ೫ ರ ತನಕ ಮತದಾನ ನಡೆಯಲಿದ್ದು,   ೫, ೧೫,೯೪೨  ಮಹಿಳೆಯರು , ೪,೯೫ ೦೮೮ ಪುರುಷರು ತಮ್ಮ  ಹಕ್ಕನ್ನು ಚಲಾಯಿಸಲಿದ್ದಾರೆ . ಈ ಪೈಕಿ ೨೪, ೮೫೯ ಹೊಸ ಮತದಾರರಾಗಿದ್ದರೆ .

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ  ಅತ್ಯಧಿಕ ಮತದಾರರಿದ್ದಾರೆ.  ೧,೦೫, ೪೬೨ ಮಹಿಳೆಯರು , ೧,೦೬, ೬೨೪  ಪುರುಷ ರು ಸೇರಿದಂತೆ ೨,೧೨,೦೮೬ ಮತದಾರರಿದ್ದಾರೆ . 

ಪೈವಳಿಕೆ ಗ್ರಾಮ ಪಂಚಾಯತ್ ನ  ೧೦೫ ನೇ ನಂಬ್ರದ  ಪೈವಳಿಕೆ  ಸರಕಾರಿ ಹೈಸ್ಕೂಲ್  ಮತಗಟ್ಟೆಯಲ್ಲಿ ೧೩೮೫ ಮತದಾರರಿದ್ದಾರೆ . ವಳಿಯಪರಂಬ ಗ್ರಾಮ ಪಂಚಾಯತ್ ನ ೧೫೧ ನೇ  ವಳಿಯಪರಂಬ ಅಂಗನವಾಡಿ ಮತಗಟ್ಟೆಯಲ್ಲಿ  ಕನಿಷ್ಟ ೨೨೬ ಮತದಾರಿದ್ದಾರೆ.

ಎಲ್ಲಾ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್  ಹೊಂದಿದ್ದು ,  ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ .

ಕಾಸರಗೋಡು ಕ್ಷೇತ್ರದ ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ೩೦ ವರ್ಷಗಳಿಂದ  ಸಿಪಿಎಂ ನೇತೃತ್ವದ ಎಲ್ ಡಿ ಎಫ್ ನ ಭದ್ರಕೋಟೆಯಾಗಿರುವ  ಈ ಕ್ಷೇತ್ರವು ಎಲ್ ಡಿ ಎಫ್ , ಕಾಂಗ್ರೆಸ್ ನೇತೃತ್ವದ  ಯು ಡಿ ಎಫ್ ಹಾಗೂ ಬಿಜೆಪಿಗೆ ನಿರ್ಣಾಯಕವಾಗಿದೆ .

See also  ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ವೀಡಿಯೊ ಸಂವಾದ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು