News Kannada
Wednesday, November 30 2022

ಕರ್ನಾಟಕ

ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ರೌಡಿಶೀಟರ್ ಹತ್ಯೆ - 1 min read

Photo Credit :

ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ರೌಡಿಶೀಟರ್ ಹತ್ಯೆ

ಮದ್ದೂರು: ರೌಡಿ ಶೀಟರೊಬ್ಬನ ಹತ್ಯೆ ಸಂಚು ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿರುವ ಘಟನೆಯೊಂದು ತಾಲೂಕಿನ ನಿಡಘಟ್ಟದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಪೊಲೀಸರು ಸಂಚು ರೂಪಿಸಿದ ದುಷ್ಕರ್ಮಿಗಳ ಪೈಕಿ ಓರ್ವನನ್ನು ವಶಕ್ಕೆ ತೆಗೆದುಕೊಂಡ  ಪೊಲೀಸರು ನಂತರ ರಾಜಕೀಯ ಒತ್ತಡಕ್ಕೊಳಗಾಗಿ ಬಿಡುಗಡೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರ ರೌಡಿ ಪಟ್ಟಿಯಲ್ಲಿರುವ ವರುಣ ದುಷ್ಕರ್ಮಿಗಳ ಹತ್ಯೆಗೆ ಬಲಿಯಾಗಬೇಕಿದ್ದು, ಪೊಲೀಸರ ಸಕಾಲಿಕ ಪ್ರವೇಶದಿಂದಾಗಿ ಹತ್ಯೆ ಪ್ರಯತ್ನದಿಂದ ಪಾರಾಗಿದ್ದಾನೆ.

ಈತನ ಹತ್ಯೆಗಾಗಿ ರೌಡಿಗಳಾದ ಬತ್ತಿ, ಬೆಂಕಿ ಶಿವ, ಬೆಳ್ಳೂರು ರವಿ, ಡಿ.ಎ.ಕೆರೆಯ ಕೋಣನಹಳ್ಳಿ ಅಭಿ ಅವರುಗಳು ತಮ್ಮ ಇಬ್ಬರ ಸಹಚರರೊಂದಿಗೆ ರೌಡಿಶೀಟರ್ ವರುಣನ ಹತ್ಯೆಗೆ ಸಂಚು ರೂಪಿಸಿದ್ದರು.

ಕಳದೆ ಏ. 20ರಂದು ನಾಲ್ವರು ಬೈಕ್‍ಗಳಲ್ಲಿ ನಿಡಘಟ್ಟಕ್ಕೆ ತೆರಳಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ವರುಣನ ಕೊಲೆಗೆ ಸಂಚು ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಪೆÇಲೀಸರು ಸ್ಥಳಕ್ಕೆ ತೆರಳಿ ಬೆಂಕಿ ಶಿವನನ್ನು ವಶಕ್ಕೆ ತೆಗೆದುಕೊಂಡು ಕೃತ್ಯಕ್ಕೆ ಬಳಸಲು ಯತ್ನಿಸಿದ್ದ ಬೈಕ್‍ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳಿದ ಆರೋಪಿಗಳು ಸ್ಥಳದಿಂದ ಪರಾರಿಯಾದರು.

ನಂತರ ಬೆಂಕಿ ಶಿವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ವರುಣನ ಹತ್ಯೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಪೊಲೀಸರ ವಶದಲ್ಲಿದ್ದ ಬೆಂಕಿ ಶಿವನ ಬಿಡುಗಡೆಗಾಗಿ ಪುರಸಭಾ ಸದಸ್ಯೆಯೊಬ್ಬರು ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿದ ಪೊಲೀಸರು ಸಿಆರ್ ಪಿಸಿ ಅನ್ವಯ ಮುಂಜಾಗ್ರತಾ ಕ್ರಮವಾಗಿ ತಹಸೀಲ್ದಾರ್ ನ್ಯಾಯಾಲಯದಲ್ಲಿ ಸಿಆರ್‍ಪಿಸಿ 110ರನ್ವಯ ಪ್ರಕರಣ ದಾಖಲು ಮಾಡಿ ಬಿಡುಗಡೆ ಮಾಡಿದ್ದಾರೆ.

ವರಣನ ಸಹೋದರ ಚರಣ ಹಾಗೂ ವಳಗೆರೆಹಳ್ಳಿಯ ಸುಹಾಸ್ ಅಲಿಯಾಸ್ ಮಲ್ಲು ಅಲಿಯಾಸ್ ಬತ್ತಿ ಇಬ್ಬರ ನಡುವೆ ಕೆಲ ದಿನಗಳ ಹಿಂದೆ ಮಾತಿನ ಚಕಮಕಿ ನಡೆದಿತ್ತು. ಮತ್ತೆ ಇದೇ ಘಟನೆ ಮರುಕಳಿಸಿ ಸುಹಾಸ್ ಅಲಿಯಾಸ್ ಬತ್ತಿಯನ್ನು ವರುಣ ನನ್ನ ತಮ್ಮನ ಮೇಲೆ ಜಗಳ ತೆಗೆದಿದ್ದೀಯಾ ಎಂದು ಕೇಳಿದ್ದಾನೆ. ಇವರಿಬ್ಬರ ನಡುವೆ ದೂರವಾಣಿಯಲ್ಲೇ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ವರುಣ ನಿಡಘಟ್ಟದಲ್ಲಿರುವ ಮಾಹಿತಿ ಅರಿತ ಸುಹಾಸ್ ಅಲಿಯಾಸ್ ಬತ್ತಿ ತನ್ನ ನಾಲ್ವರು ಸಹಚರರೊಂದಿಗೆ ಸ್ಥಳಕ್ಕೆ ತೆರಳಿ ಹತ್ಯೆ ಮಾಡಲು ಸಂಚು ರೂಪಿಸಿದ್ದ. ಇದು ಪೊಲೀಸರಿಗೆ ಮಾಹಿತಿ ತಿಳಿದುಬಂದಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಪ್ರಕರಣವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರುಣ ಹಲವಾರು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ, ಚನ್ನಪಟ್ಟಣದ ರೌಡಿ ಧೃವ ಮತ್ತು ಕೆಮ್ಮಣ್ಣುನಾಲೆ ಬಳಿ ಕಳೆದ ಕೆಲ ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದಾನೆಂದು ಹೇಳಲಾಗಿದೆ.

See also  ಚಿತ್ರದುರ್ಗದಲ್ಲಿ ಅಪಘಾತ: ಏಳು ಮಂದಿ ಸ್ಥಳದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು