News Kannada
Friday, December 02 2022

ಕರ್ನಾಟಕ

ನಂಜರಾಯಪಟ್ಟಣದಲ್ಲಿ ಗಾಂಜಾ ಗಿಡ ವಶ: ಮೂವರ ಬಂಧನ

Photo Credit :

ನಂಜರಾಯಪಟ್ಟಣದಲ್ಲಿ ಗಾಂಜಾ ಗಿಡ ವಶ: ಮೂವರ ಬಂಧನ

ಮಡಿಕೇರಿ: ಕಾಫಿ ತೋಟವೊಂದರಲ್ಲಿ ಅನಧಿಕೃತವಾಗಿ ಗಾಂಜಾ ಬೆಳೆದಿರುವ ಪ್ರಕರಣವನ್ನು ಪತ್ತೆ ಹಚ್ಚಿರುವ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದು, ಸುಮಾರು 7 ಕೆ.ಜಿ ತೂಕದ 8 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಗೆ ದೊರೆತ ಖಚಿತ ಸುಳಿವಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಅವರು ಸಿಬ್ಬಂದಿಗಳೊಂದಿಗೆ ನಂಜರಾಯಪಟ್ಟಣದ ಚೆರುಮಂದಂಡ ವಾಸು ಎಂಬವರ ತೋಟಕ್ಕೆ ದಾಳಿ ನಡೆಸಿದಾಗ ಅಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚೆರುಮಂದಂಡ ವಾಸು (55), ಅವರ ಪುತ್ರರಾದ ಸಿ.ವಿ.ರಕ್ಷಿತ್ (20) ಹಾಗೂ ಸಿ.ವಿ.ಜಗದೀಶ್(28) ಎಂಬವರುಗಳನ್ನು ಬಂಧಿಸಿ, ತೋಟದಲ್ಲಿ ಬೆಳೆದಿದ್ದ 6.900ಕೆ.ಜಿ ತೂಕದ 8 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್‍ಪಿ ದಿನಕರ ಶೆಟ್ಟಿ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್. ದಿನೇಶ್‍ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್, ಪ್ರೊಬೆಷನರಿ ಪಿಎಸ್‍ಐ ಅರ್ಚನಾ, ಸಜಿ, ಜೋಸೆಫ್, ಪ್ರಕಾಶ್, ಅಜಿತ್, ಪ್ರಸನ್ನ, ನಾಗರಾಜು, ಮೀನಾಕ್ಷಿ, ಚಾಲಕರಾದ ಪ್ರವೀಣ್ ಹಾಗೂ ರಾಜ ಪಾಲ್ಗೊಂಡಿದ್ದರು.

See also  ರೈತ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು