News Kannada
Friday, December 09 2022

ಕರ್ನಾಟಕ

ಸಂತೆಮರಹಳ್ಳಿ ಆಸ್ಪತ್ರೆಗೆ ಬರೋರಿಗೆ ಬೀದಿನಾಯಿಗಳದ್ದೇ ಭಯ

Photo Credit :

ಸಂತೆಮರಹಳ್ಳಿ ಆಸ್ಪತ್ರೆಗೆ ಬರೋರಿಗೆ ಬೀದಿನಾಯಿಗಳದ್ದೇ ಭಯ

ಚಾಮರಾಜನಗರ: ಇತ್ತೀಚೆಗಿನ ದಿನಗಳಲ್ಲಿ ಪಟ್ಟಣಗಳಲ್ಲಿ ಮಾತ್ರವಲ್ಲದೆ ಹೋಬಳಿ ಕೇಂದ್ರಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನ ಓಡಾಡಲು ಭಯಪಡುವಂತಾಗಿದೆ.

ಇದೀಗ ತಾಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ವಾಸ ಮಾಡುತ್ತಿದ್ದು ಸದಾ ಆಸ್ಪತ್ರೆ ಆವರಣದಲ್ಲಿಯೇ ಬೀಡು ಬಿಟ್ಟಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಆತಂಕವನ್ನು ಹೆಚ್ಚಿಸುವಂತೆ ಮಾಡಿವೆ. ಇದಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೊಂಡು ವರ್ಷವೇ ಕಳೆದಿದ್ದರೂ ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಲ್ಲ. ಪರಿಣಾಮವಾಗಿ ಈಗ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆದುಕೊಳ್ಳಲು ದೇಶವಳ್ಳಿ, ಬಸವಟ್ಟಿ, ಕಾವುದವಾಡಿ, ತೆಳ್ಳನೂರು, ಕಮರವಾಡಿ, ಹೆಗ್ಗವಾಡಿಪುರ, ಕೆಂಪನಪುರ, ಹೊಸಮೋಳೆ ಸೇರಿದಂತೆ ನಾನಾ ಗ್ರಾಮಗಳಿಂದ ಗರ್ಭೀಣಿಯರು ಆಸ್ಪತ್ರೆ ಬರುತ್ತಾರೆ. ಆದರೆ ಹೊಸ ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಅದರಲ್ಲೂ ಆಸ್ಪತ್ರೆಗೆ ತೆರಳುವ ಮುಖ್ಯ ಬಾಗಿಲುಗಳಲ್ಲಿ ನಾಯಿಗಳು ಮಲಗಿರುತ್ತವೆ. ಅವು ಯಾವಾಗ ದಾಳಿ ಮಾಡಿಬಿಡುತ್ತವೆಯೋ ಎಂಬ ಭಯ ರೋಗಿಗಳನ್ನು ಕಾಡುತ್ತಿದೆ.

ಕಳೆದ ಒಂದು ವಾರದ ಹಿಂದೆ ಹೊಸ ಆಸ್ಪತ್ರೆ ಹಾಗೂ ಹಳೆ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಡಿ. ಗ್ರೂಪ್ ನೌಕರರನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಇಲ್ಲಿ ಸಿಬ್ಬಂದಿಯಿಲ್ಲದೆ ಇರುವುದರಿಂದ ನಾಯಿಗಳು ಆಸ್ಪತ್ರೆ ಒಳಗೆಲ್ಲ ಓಡಾಡುತ್ತಿರುತ್ತವೆ. ಈ ಬೀದಿ ನಾಯಿಗಳ ಹಾವಳಿಯಿಂದ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕಿದೆ.

See also  ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು, ಮಗು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು