News Kannada
Saturday, November 26 2022

ಕರ್ನಾಟಕ

ಕೊಡಗು ಕ್ರೀಡೋತ್ಸವಕ್ಕೆ ಚಾಲನೆ - 1 min read

Photo Credit :

ಕೊಡಗು ಕ್ರೀಡೋತ್ಸವಕ್ಕೆ ಚಾಲನೆ

ಮಡಿಕೇರಿ: ಸಮಾಜದಲ್ಲಿನ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲು ತಮ್ಮ ಛಾಪನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಪಡಿಜ್ಞರಂಡ ಜಿ.ಚಂಗಪ್ಪ ಕರೆ ನೀಡಿದರು.

ಹಾತೂರು ಎಂ.ಎಂ.ಸಿ. ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 18ನೇ ವರ್ಷದ ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಕ್ರೀಡೋತ್ಸವವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟದ ಮೂಲಕ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಹೆಗ್ಗಡೆ ಸಮಾಜ ಯಶಸ್ವಿಯಾಗಿದೆ ಎಂದರು.

ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಏಳಿಗೆಗೆ, ಅಭಿವೃದ್ಧಿಗೆ ಕ್ರೀಡೋತ್ಸವದಿಂದ ಅನುಕೂಲವಾಗಿದೆ. ಇದರ ಪ್ರಯತ್ನದ ಫಲವಾಗಿ ಸಮಾಜದ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ಕ್ರಿಡೋತ್ಸವದ ಯಶಸ್ಸಿಗೆ ಸಮಾಜ ಬಾಂಧವರು ಕೈ ಜೋಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಜ್ಞರಂಡ ಜಿ.ಅಯ್ಯಪ್ಪರವರು, ಕ್ರೀಡೋತ್ಸವವು ಒಗ್ಗಟ್ಟಿನ ಸಂಕೇತವಾಗಿದೆ. ವಲಯ ಮಟ್ಟದಿಂದ ಆರಂಭವಾದ ಕ್ರಿಡೋತ್ಸವ ಇಂದು ಬೃಹತ್ ಆಗಿ ಬೆಳೆದಿರುವುದು ಸಮಾಜದ ಒಗ್ಗಟ್ಟಿನ ಫಲ ಎಂದರು. ಪಾನಿಕುಟ್ಟಿರ ಕುಟುಂಬ 18ನೇ ವರ್ಷದ ಕ್ರೀಡೋತ್ಸವದ ಟ್ರೋಫಿ ಧಾನಿಗಳಾಗಿದ್ದರು.

ಹಾತೂರು, ಕಡಿಯತ್ತೂರು, ಬಿಟ್ಟಂಗಾಲ, ಪಾರಾಣೆ, ಬೆಟ್ಟಗೇರಿ, ಒಂಟಿಯಂಗಡಿ, ಮೈತಾಡಿ, ಹಾಲುಗುಂದ ವಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ವಿವಿಧ ವಲಯಗಳಿಂದ ಆಗಮಿಸಿದ್ದ ಸಮಾಜ ಬಾಂಧವರು ಸಾಂಪ್ರದಾಯಿಕ ದುಡಿಕೊಟ್ಟಿನ ಮೂಲಕ ಮೆರವಣಿಗೆ ನಡೆಸಿ ನಂತರ ಸಮಾಗಮಗೊಂಡರು.ಮೂರು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಖಜಾಂಜಿ ಪಾನಿಕುಟ್ಟಿರ ರಾಧ ಕುಟ್ಟಪ್ಪ, ನಿರ್ದೇಶಕರಾದ ಮೂರಿರ ಕುಶಾಲಪ್ಪ, ಚರ್ಮಂಡ ಅಪ್ಪುಣು ಪೂವಯ್ಯ, ತೋರೆರ ಟಿ.ಮುದ್ದಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ, ಪೊಕ್ಕಳಿಚಂಡ ರಾಜ ಕಾಳಪ್ಪ, ಪಡಿಜ್ಞರಂಡ ಪ್ರಭುಕುಮಾರ್, ಕೊಂಗೇಪಂಡ ರವಿ, ಚೋವಂಡ ಇಂದಿರಾ ಪೊನ್ನಮ್ಮ, ಮಳ್ಳಡ ಸುತ ಪೂಣಚ್ಚ, ಮೂರೀರ ಶಾಂತಿ, ಕೋಕೇರ ಸನ್ನಿಪಳಂಗಪ್ಪ, ಪಂದಿಕಂಡ ಸುನ,ತಂಬಂಡ ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

 

See also  ಕಾಸರಗೋಡು: ಡಿಪೋದಲ್ಲೇ ಕೆಎಸ್ ಆರ್ ಟಿಸಿ ಬಸ್ ಚಾಲಕ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು