News Kannada
Tuesday, December 06 2022

ಕರ್ನಾಟಕ

ಕಾಸರಗೋಡಿನಲ್ಲಿ ಮೂವರು ನಕಲಿ ಮತದಾನ ಮಾಡಿರುವುದು ಸ್ಪಷ್ಟ

Photo Credit :

ಕಾಸರಗೋಡಿನಲ್ಲಿ ಮೂವರು ನಕಲಿ ಮತದಾನ ಮಾಡಿರುವುದು ಸ್ಪಷ್ಟ

ಕಾಸರಗೋಡು: ಎಪ್ರಿಲ್ ೨೩ ರಂದು ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಲ್ಯಾಶ್ಯೇರಿ ಮತಗಟ್ಟೆಯಲ್ಲಿ ಮೂವರು ನಕಲಿ ಮತದಾನ ಮಾಡಿರುವುದು ತನಿಖೆಯಿಂದ ಸ್ಪಷ್ಟಗೊಂಡಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಟಿಕಾರಾಂ ಮೀನಾ ತಿಳಿಸಿದ್ದಾರೆ.

ಮುಹಮ್ಮದ್ ಫಾಯಿಜ್, ಅಬ್ದುಲ್ ಸಮದ್, ಮುಹಮ್ಮದ್ ಕೆ ಎಂ ನಕಲಿ ಮತದಾನ ಮಾಡಿದ್ದಾರೆ.

ಆಶಿಕ್ ಕೆ.ಎಂ ಎಂಬಾತ ನ ಬಗ್ಗೆ ಸಂಶಯಗಳಿದ್ದು , ಈತ ಹಲವು ಬಾರಿ ಮತಗಟ್ಟೆ ಬಳಿ ಸುತ್ತಾಡುತ್ತಿದ್ದ ಈತ ನಕಲಿ ಮತದಾನ ಮಾಡಿದ್ದಾನೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಲ್ಯಾಶ್ಯೇರಿಯ ೬೯ ಮತ್ತು ೭೦ ನೇ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಸಂಬಂಧ ಪಟ್ಟಂತೆ ನಾಲ್ವರನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಮೂವರು ನಕಲಿ ಮತಗಳನ್ನು ಚಲಾಯಿಸಿರುವುದು ಸ್ಪಷ್ಟಗೊಂಡಿದೆ .

ಅಬ್ದುಲ್ ಸಮದ್ ಎರಡು ಮತ, ಮುಹಮ್ಮದ್ ಫಾಯಿಜ್ ತನ್ನ ಮತ ಸೇರಿದಂತೆ ಮೂರು ಮತಗಳನ್ನು ಚಲಾಯಿಸಿದ್ದಾನೆ. ಮುಹಮ್ಮದ್ ಕೆ.ಎಂ ಮೂರು ಮತಗಳನ್ನು ಚಲಾಯಿಸಿರುವುದು ಸ್ಪಷ್ಟಗೊಂಡಿದೆ ಎಂದು ಚುನಾವಣಾ ಆಯುಕ್ತ ಟಿಕಾರಾಂ ಮೀನಾ ತಿಳಿಸಿದ್ದಾರೆ.
ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗದ ಅಬ್ದುಲ್ ಸಮದ್ ವಿರುದ್ಧ ವಾರಂಟ್ ಹೊರಡಿಸಲಾಗುವುದು.

ಜಿಲ್ಲಾಧಿಕಾರಿ , ಸಹಾಯಕ ಚುನಾವಣಾ ಆಯುಕ್ತ , ಸೆಕ್ಟರಲ್ ಅಧಿಕಾರಿ ಮೊದಲಾದವರ ವರದಿಯಂತೆ ನಕಲಿ ಮತ ಖಚಿತ ಪಡಿಸಲಾಗಿದೆ. ಆದರೆ ಮತದಾನದ ಸಂದರ್ಭದಲ್ಲಿ ನಕಲಿ ಮತ ಚಲಾಯಿಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಮತಗಟ್ಟೆ ಅಧಿಕಾರಿ ಮತ್ತು ಸಿಬಂದಿ ವಿಚಾರಣೆ ಸಂದರ್ಭದಲ್ಲಿ ಹೇಳಿರುವುದಾಗಿ ಮೀನಾ ತಿಳಿಸಿದ್ದಾರೆ.

ನಕಲಿ ಮತದಾನ ನಡೆಸಿದವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು. ಇನ್ನೂ ಹಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದ ಬಗ್ಗೆ ದೂರುಗಳು ಬಂದಿದ್ದು , ತನಿಖೆ ನಡೆಯುತ್ತಿದೆ . ಅಧಿಕಾರಿಗಳು ತಪ್ಪಿತಸ್ಥರಾದರೆ ಅವರ ವಿರುದ್ದವೂ ಕ್ರಮ ತೆಗೆದುಕೊಳ್ಳಲಾಗುವುದು. ಏಳು ದಿನಗಳೊಳಗೆ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.

 

See also  ಕ್ವಿಟ್ ಇಂಡಿಯಾ ದಿನಾಚರಣೆ: ಕಾಸರಗೋಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಅಭಿನಂದನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು