News Kannada
Wednesday, November 30 2022

ಕರ್ನಾಟಕ

ಕೂಲಿಗಾಗಿ ಬಿದರಹಳ್ಳಿ ಗ್ರಾ.ಪಂ. ಮುತ್ತಿಗೆ ಹಾಕಿ ಪ್ರತಿಭಟನೆ - 1 min read

Photo Credit :

ಕೂಲಿಗಾಗಿ ಬಿದರಹಳ್ಳಿ ಗ್ರಾ.ಪಂ. ಮುತ್ತಿಗೆ ಹಾಕಿ ಪ್ರತಿಭಟನೆ

ಭಾರತೀನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಸಮರ್ಪಕ ಉದ್ಯೋಗ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಸಮೀಪದ ಬಿದರಹಳ್ಳಿ ಗ್ರಾ.ಪಂ. ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಬಡವರ ಪಾಲಿಗೆ ಸಂಜೀವಿನಿಯಾಗಿರುವ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಕೂಲಿಕಾರರಿಗೆ ನೀಡುತ್ತಿಲ್ಲ. ಗ್ರಾಮಗಳು ಅಭಿವೃದ್ದಿಯಾಗಲೆಂದು ಈ ಯೋಜನೆಯ ಉದ್ದೇಶವಾಗಿದೆ. ಆದರೆ ಇಲ್ಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಈ ಯೋಜನೆಗೆ ಕಳಂಕ ತರುವಂತೆ ನಡೆದುಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಕೂಲಿಕಾರರಿಗೆ ಕೆಲಸ ಸಿಗದೆ ರಾಜ್ಯದಿಂದ ರಾಜ್ಯಕ್ಕೆ ಗುಳೆಹೋಗುವಂತಹ ಪರಿಸ್ಥಿತಿ ಬಂದಿದೆ. ಇದನ್ನು ತಪ್ಪಿಸಲು ಕೇಂದ್ರದ ಯುಪಿಎ-1 ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿದೆ. ಆದರೆ ಈ ಗ್ರಾಮಪಂಚಾಯ್ತಿಯಲ್ಲಿ ಕೂಲಿಕಾರರಿಗೆ ಉದ್ಯೋಗವನ್ನು ನೀಡಲು ಮೀನಾಮೇಷ ಎಣಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕೂಲಿಕಾರರು ಕೆಲಸ ಕೇಳಲು ನಮೂನೆ 7ರ ಅರ್ಜಿಯನ್ನು ತೆಗೆದುಕೊಂಡು ಪಂಚಾಯ್ತಿಗೆ ಹೋದರೆ ನೆಪ ಹೇಳಿಕೊಂಡು ಅರ್ಜಿಯನ್ನು ಸ್ವೀಕರಿಸದೆ ಕೂಲಿಕಾರರನ್ನು ಅಲೆದಾಡಿಸುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಕೂಲಿಕಾರರೊಂದಿಗೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ನಮೂನೆ 7 ರಲ್ಲಿ ಅರ್ಜಿಸಲ್ಲಿಸಿರುವ ಕೂಲಿಕಾರರಿಗೆ ನಿರುದ್ಯೋಗ ಭತ್ಯೆ ಪಾವತಿ ಮಾಡಬೇಕು. ಉದ್ಯೋಗ ಖಾತರಿ ಕೆಲಸಕ್ಕಾಗಿ ನಮೂನೆ 7ರಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಕೂಲಿಕಾರರಿಗೂ ತಕ್ಷಣ ಕೆಲಸ ನೀಡಬೇಕು. ಕೆಲಸದ ಸ್ಥಳದಲ್ಲಿ ಕುಡಿಯಲು ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೆರಳು ಒದಗಿಸಬೇಕು. ಶಿಥಿಲಗೊಂಡಿರುವ ಸರ್ಕಾರಿ ಆರೋಗ್ಯ ಉಪಕೇಂದ್ರ ವಸತಿ ಗೃಹ ಕೊಠಡಿಯನ್ನು ಅಭಿವೃದ್ದಿ ಪಡಿಸಿ ಶೂಶ್ರೂಷಕಿಯರು ವಾಸಿಸಿ ಚಿಕಿತ್ಸೆ ನೀಡಲು ಮತ್ತು ವೈದ್ಯರು ಬಂದು ಕೆಲಸ ನಿರ್ವಹಿಸುವಂತಾಗಲು ಅನುವು ಮಾಡಿಕೊಡಬೇಕು. ಶುದ್ದ ಕುಡಿಯುವ ನೀರಿನ ಘಟಕವನ್ನು ತಕ್ಷಣ ಪ್ರಾರಂಭಿಸಿ ಜನರಿಗೆ ಶುದ್ದ ನೀರನ್ನು ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಕೃಷಿಕೂಲಿಕಾರರ ಸಂಘದ ಜಿಲ್ಲಾಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಶುಭಾವತಿ, ಎನ್.ಶಿವಕುಮಾರ್, ಎಚ್.ಸಿ.ನಾಗರಾಜು, ಜಯಮ್ಮ, ಕೆಂಪಮ್ಮ, ಭಾಗ್ಯ, ಚಿಕ್ಕಬೋರೇಗೌಡ, ಎಸ್.ಪಿ.ಮಾದು, ಅನಿತಾ, ಶೋಭಾ, ಮಂಗಳಮ್ಮ, ಚಿಕ್ಕತಮ್ಮಯ್ಯ, ರಾಧ ಸೇರಿದಂತೆ ಇತರರಿದ್ದರು.

See also  ಇಂದಾವರ ಗ್ರಾಮದಲ್ಲಿ ಗಬ್ಬು ಹರಡುತ್ತಿದೆ ಚಿಕ್ಕಮಗಳೂರಿನ ಕಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು