News Kannada
Tuesday, November 29 2022

ಕರ್ನಾಟಕ

ನೀರಿನಲ್ಲಿ ಮುಳುಗಿ ಇಬ್ಬರ ದುರ್ಮರಣ - 1 min read

Photo Credit :

ನೀರಿನಲ್ಲಿ ಮುಳುಗಿ ಇಬ್ಬರ ದುರ್ಮರಣ

ಹನೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.  

ತಾಲೂಕಿನ ಹೊಗೇನಕಲ್ ಜಲಪಾತದಲ್ಲಿ ವೀಕ್ಷಿಸಿಸಲು  ಹೋಗಿ ಅಲ್ಲಿ  ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೈಸೂರು ದಕ್ಷಿಣ ವಲಯ ಐಜಿಪಿಯವರ ವಾಹನ ಚಾಲಕ ಬಾಲಕೃಷ್ಣರವರ ಪುತ್ರ ರಾಘವೇಂದ್ರ ಉರುಫ್ ಕಿರಣ್ (24) ಸಾವನ್ನಪ್ಪಿರುವ ದುರ್ದೈವಿ.

ಘಟನೆ ವಿವರ: ರಾಘವೇಂದ್ರನು ತನ್ನ ಸ್ನೇಹಿತರೊಂದಿಗೆ ಹನೂರು ತಾಲ್ಲೂಕಿನ ತಮಿಳುನಾಡು ರಾಜ್ಯ ಗಡಿಯಂಚಿನಲ್ಲಿರುವ ಹೊಗೇನಕಲ್ ಜಲಪಾತ ವೀಕ್ಷಿಸಲು ಹೋಗಿದ್ದು, ಬಳಿಕ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ವೇಳೆ  ಈತನ ರಕ್ಷಣೆಗೆ ಆಗಮಿಸಿದ್ದ ಸಂಗಡಿಗರು ಸಹ ನೀರಿನ ಸುಳಿಗೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಇವರು ನೆರವಿಗೆ ಸ್ಥಳೀಯರು ಆಗಮಿಸಿ ಮೂವರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಲೈಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೂಂಡಿದ್ದಾರೆ.

ಮತ್ತೊಂದು ಪ್ರಕರಣ:  ತಾಲೂಕಿನ ಲೊಕ್ಕನಹಳ್ಳಿ ಕೆರೆಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿದ್ದಾನೆ.

ಸಮೀಪದ ಬೂದಿಪಡಗ ಗ್ರಾಮದ ರಂಗ(23) ಮೃತಪಟ್ಟಿದ್ದು, ಈತ ಸ್ನೇಹಿತರೊಂದಿಗೆ ಈಜಲು ಲೊಕ್ಕನಹಳ್ಳಿ ಕೆರೆಗೆ ತೆರಳಿದಾಗ  ದುರ್ಘಟನೆ ಸಂಭವಿಸಿದೆ. ಕೆರೆಯಲ್ಲಿ ಗೆಳೆಯರೊಂದಿಗೆ ಈಜುತ್ತಿದ್ದ ವೇಳೆ ಕೆಸರಿನಲ್ಲಿ ಸಿಲುಕಿಕೊಂಡಿದ್ದ ರಂಗ ಮೇಲೇಳಲಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜೊತೆಗಿದ್ದ ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ. 

See also  ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪೊಲಿಂಕಾನ ಉತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು