News Kannada
Tuesday, November 29 2022

ಕರ್ನಾಟಕ

ಜಿಲ್ಲಾಡಳಿತ ನೇತೃತ್ವದಲ್ಲಿ ಹೆದ್ದಾರಿ ಬದಿ ಸ್ವಚ್ಛತಾ ಕಾರ್ಯ - 1 min read

Photo Credit :

ಜಿಲ್ಲಾಡಳಿತ ನೇತೃತ್ವದಲ್ಲಿ ಹೆದ್ದಾರಿ ಬದಿ ಸ್ವಚ್ಛತಾ ಕಾರ್ಯ

ಕಾಸರಗೋಡು: ಜಿಲ್ಲಾಡಳಿತದ ನೇತೃತ್ವದಲ್ಲಿ ಗುರುವಾರ ಜಿಲ್ಲೆಯ ಹೆದ್ದಾರಿ ಬದಿ ಸ್ವಚ್ಛತಾ ಕಾರ್ಯ ನಡೆಯಿತು. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಶ್ರಮದಾನ ನಡೆಸಿದರು. 15 ಮೆಟ್ರಿಕ್ ಟನ್ ತ್ಯಾಜ್ಯ ಈ ಮೂಲಕ ಸಂಗ್ರಹಿಸಲಾಗಿದೆ. 2600 ಮಂದಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಸಿಬ್ಬಂದಿ, ಶಿಕ್ಷಕರು, ಉದ್ಯೋಗ ಖಾತರಿ ಯೋಜನೆ ಕಾರ್ಯಕರ್ತರು ಕೈ ಜೋಡಿಸಿದರು.

ಆರೋಗ್ಯ ಜಾಗೃತಿಯ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಿತ ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ಜಿಲ್ಲಾಡಳಿತ ಈ ತೀವ್ರ ಶುಚೀಕರಣ ಯಜ್ಞ ನಡೆಸಿದೆ. ವಿದ್ಯಾರ್ಥಿ ಪೊಲೀಸ್, ರಾಷ್ಟ್ರೀಯ ಸೇವಾ ಯೋಜನೆ, ಕುಟುಂಬಶ್ರೀ , ರೆಸಿಡೆನ್ಸ್ ಅಸೋಸಿಯೇಶನ್, ಉದ್ಯೋಗ ಖಾತರಿ ಯೋಜನೆ, ಯೂತ್ ಕ್ಲಬ್,ಹರಿತ ಕ್ರಿಯಾ ಸೇನೆ ಸಹಿತ ಸಂಘಟನೆಗಳ ಕಾರ್ಯಕರ್ತರು ಶುಚೀಕರಣ ನಡೆಸಿದರು.

ಜಿಲ್ಲೆಯಾದ್ಯಂತ ಶುಚೀಕರಣ ನಡೆದಿದ್ದು, 229.8 ಕಿಮೀ ಉದ್ದದ ಹೆದ್ದಾರಿ ಬದಿ ತ್ಯಾಜ್ಯ ತೆರವು ನಡೆಸಲಾಗಿದೆ. 76.8 ಕಿಮೀ ರಾಷ್ಟ್ರೀಯ ಹೆದ್ದಾರಿ, 29ಕಿಮೀ ಕೆ.ಎಸ್.ಟಿ.ಪಿ.ರಸ್ತೆ, 33 ಕಿಮೀ ರಾಜ್ಯ ಹೆದ್ದಾರಿ, 91 ಕಿಮೀ ಜಿಲ್ಲೆಯ ಪ್ರಧಾನ ರಸ್ತೆಗಳ ಬದಿಗಳಲ್ಲಿ ಈ ಶುಚೀಕರಣ ನಡೆಸಲಾಗಿದೆ.   

ತಲಪಾಡಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡಿನಲ್ಲಿ ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಕಾಲಿಕಡವಿನಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಶುಚೀಕರಣ ನಡೆಸಿದವರಿಗೆ ಮಾಸ್ಕ್, ಗ್ಲೌಸ್, ಗೋಣಿಚೀಲ ಇತ್ಯಾದಿ ಶುಚಿತ್ವ ಮಿಷನ್ ಜಿಲ್ಲಾ ಘಟಕ ಒದಗಿಸಿತ್ತು. ಇವರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಕ್ರಿಯವಾಗಿತ್ತು. ಸಂಗ್ರಹಿಸಲಾದ ತ್ಯಾಜ್ಯಗಳನ್ನು ಚೀಮೇನಿಯ ತೋಟಗಾರಿಕೆ ನಿಗಮ, ಪಿಲಿಕೋಡ್ ವಲಯ ಕೃಷಿ ಸಂಶೋಧನೆ ಕೇಂದ್ರ, ಸೀತಾಂಗೋಳಿ ಕಿನ್ಫ್ರಾ ಸಮೀಪದ ಸರಕಾರಿ ಜಾಗಗಳಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲಿ ಪರಿಷ್ಕರಣೆ ನಡೆಸಲಾಗುವುದು ಎಂದು ಸಂಬಂಧ ಪಟ್ಟವರು ತಿಳಿಸಿದರು.  

ತಲಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಸ್ವಯಂ ಹೊಣೆಗಾರಿಕೆಯಾಗಿರುವ ತ್ಯಾಜ್ಯ ತೆರವುಗೊಳಿಸುವುದು ಮಹತ್ತರ ಪುಣ್ಯ ಕಾರ್ಯ. ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಸುರಿಯುವುದು ಪ್ರಕೃತಿಗೆ ನಡೆಸುವ ಮಹಾಪಾತಕ ಎಂದು ನುಡಿದರು. ಯಾರೋ ನಡೆಸುವ ಇಂಥಾ ಅಪರಾಧಗಳಿಂದ ಹಾದಿಬದಿ ಕಲುಷಿತವಾಗುವುದರ, ಪರಿಸರ ಮಾಲಿನ್ಯವೂ ಜೊತೆಗೆ ಆರೋಗ್ಯ ಸಮಸ್ಯೆಯೂ ನಿರ್ಮಾಣವಾಗುತ್ತದೆ. ಇದರ ನಿವಾರಣೆಗೆ ಸಾರ್ವಜನಿಕರ ಸತತ ಬೆಂಬಲ ಬೇಕು ಎಂದು ನುಡಿದರು.

ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್, ಕಾರ್ಯಕ್ರಮಧಿಕಾರಿ ಕೆ.ವಿ.ರಂಜಿತ್, ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಕಾಸರಗೋಡು ತಹಸೀಲ್ದಾರ್ ಶಾಹುಲ್ ಹಮೀದ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ಪ್ರಬಂಧಕ ಮಿಥುನ್,  ಮಂಜೇಶ್ವರ ತಹಸೀಲ್ದಾರ್ ಪಿ.ಜಾನ್ ವರ್ಗೀಸ್, ಲೋಕೋಪಯೋಗಿ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಸಿ.ಜೆ.ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ತಲಪಾಡಿಯಿಂದ ಮಂಜೇಶ್ವರ ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯ ತೆರವಿಗೆ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ 52 ವಿದ್ಯಾರ್ಥಿ ಪೊಲೀಸ್ ಕೆಡೆಟ್ ಗಳು, ವಿದ್ಯಾರ್ಥಿ ಪೊಲೀಸ್ ಸಮುದಾಯ ಪೊಲೀಸ್ ಅಧಿಕಾರಿ ಉಮೇಶ್ ನಾಯ್ಕ್, ಎ.ಸಿ.ಪಿ.ಒ. ಪಿ.ಜಿ.ಅನಿತಾ, ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದರು.

See also  ಬಸ್ ಗೆ ಡಿಕ್ಕಿಯಾದ ಕಾರು: ಒಂದೇ ಕುಟುಂಬದ ನಾಲ್ಕು ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು