News Kannada
Friday, December 02 2022

ಕರ್ನಾಟಕ

ಹಾಸನದ ಹುಣಸೇಕೆರೆ ಜನರಿಗೆ ಜ್ವರದ ಕಾಟ!

Photo Credit :

ಹಾಸನದ ಹುಣಸೇಕೆರೆ ಜನರಿಗೆ ಜ್ವರದ ಕಾಟ!

ಬೇಲೂರು: ತಾಲೂಕಿನ ಎಂ.ಹುಣಸೇಕೆರೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದು, ಮೇಲಿಂದ ಮೇಲೆ ಜನರು ಆಸ್ಪತ್ರೆಗೆಗಳಿಗೆ ತೆರಳಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.

ಸದ್ಯಕ್ಕೆ ಜನರನ್ನು ಕಾಡುತ್ತಿರುವ ಜ್ವರ ಡೆಂಗ್ಯೂ ಆಗಿರಬಹುದಾ ಎಂಬ ಸಂಶಯ ಜನರನ್ನು ಕಾಡುತ್ತಿದ್ದು, ಕೆಲವರು ಭಯಗೊಂಡಿದ್ದು ಈಗಾಗಲೇ ಹಾಸನ-ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ವಿಷಯ ತಿಳಿದ ಬೇಲೂರು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜನರಿಗೆ ಬಾಧಿಸುತ್ತಿರುವ ಜ್ವರ ಯಾವುದು ಎಂಬುದರ ಬಗ್ಗೆ ತಿಳಿಯುವ ಮುನ್ನವೇ ಜನ ತಮ್ಮದೇ ಆದ ಸಂಶಯಗಳನ್ನು ವ್ಯಕ್ತಪಡಿಸಿ ಆತಂಕ ಸೃಷ್ಠಿ ಮಾಡುತ್ತಿದ್ದಾರೆ.

ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಎಂ.ಹುಣಸೇಕೆರೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಇಬ್ಬರಿಂದ ಆರಂಭವಾದ ಜ್ವರ ಸದ್ಯ 20ಕ್ಕೂ ಹೆಚ್ಚು ಮಂದಿಯನ್ನು ಕಾಡುತ್ತಿದೆ. ಗ್ರಾಮದಲ್ಲಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗದಿಂದ ಸ್ಥಳೀಯ ಆಶಾ ಕಾರ್ಯಕರ್ತೆ ವಿಶಾಲಾಕ್ಷಿ  ಅವರು ಆರೋಗ್ಯ ಸಹಾಯಕರ  ಗಮನ ತಂದಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ಮತ್ತು ಹಾಸನದ ಕೀಟ ಶಾಸ್ತ್ರತಜ್ಞ ರಾಕೇಶ ಕುಲಕರ್ಣಿ ಇನ್ನು ಮುಂತಾದವರ ಜೊತೆಯಲ್ಲಿ ಗ್ರಾಮದಲ್ಲಿ  ಸಂಪೂರ್ಣ ಸರ್ವೆ ನಡೆಸಿದ್ದು, ಜ್ವರ ಇರುವುದು ಖಾತ್ರಿಯಾಗಿದೆ. ಬಳಿಕ ರಕ್ತದ ಪರೀಕ್ಷೆ ನಡೆಸಲಾಗಿದ್ದು, ಇನ್ನು ಡೆಂಗ್ಯೂ ಜ್ವರದ ಬಗ್ಗೆ ವರದಿಯಾಗಿಲ್ಲ. ಆದರೂ ಗ್ರಾಮದಲ್ಲಿ ವಾರಗಟ್ಟಲೇ ಶೇಖರಣೆ ಮಾಡಿದ ನೀರಿನ ಟ್ಯಾಂಕ್‍ಗಳನ್ನು ಖಾಲಿ ಮಾಡಲಾಗಿದೆ. ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ  ಗ್ರಾಮದಲ್ಲಿ  ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಸ್ಥಳೀಯರಿಗೆ ತಿಳುವಳಿಕೆ ಹಾಗೂ ಹೆಬ್ಬಾಳು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯ ಸಹಾಯಕ ಹಕ್ಕ್ಯಿಣ್ಣಕುಮಾರ್ ತಿಳಿಸಿದ್ದಾರೆ.

ಎಂ.ಹುಣಸೇಕೆರೆ ಗ್ರಾಮದಲ್ಲಿ ಕಾಣಿಸಿಕೊಂಡ ವೈರಲ್ ಜ್ವರದಿಂದಾಗಿ ಜನರು ವಿಪರೀತ ಮೈ ಕೈ ಹಾಗೂ ಕೀಲು ನೋವುಗಳನ್ನು ತಡೆಯಲಾಗದೆ ಆಸ್ಪತ್ರೆಗೆ ಅಲೆಯುವ ಸ್ಥಿತಿಯಾಗಿದ್ದು, ಸಂಬಂಧ ಪಟ್ಟ ಆರೋಗ್ಯಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ತಕ್ಷಣವೇ ಜನರಿಗೆ ಸ್ಪಂದಿಸಬೇಕಿದೆ, ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದಲ್ಲದೆ, ಕಾಣಿಸಿಕೊಂಡಿರುವ ಜ್ವರದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಡು ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

See also  ರೈತ ಸಂಘ ವಾಹನ ಪ್ರಚಾರ ಜಾಥಾಕ್ಕೆ ಹೊಸಂಗಡಿಯಿಂದ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು