News Kannada
Tuesday, November 29 2022

ಕರ್ನಾಟಕ

ಟ್ರಾಕ್ಟರ್ ಪಲ್ಟಿ: 5ಮಂದಿ ದುರ್ಮರಣ - 1 min read

Photo Credit :

ಟ್ರಾಕ್ಟರ್ ಪಲ್ಟಿ: 5ಮಂದಿ ದುರ್ಮರಣ

ತುಮಕೂರು:ಶನಿವಾರ ರಾತ್ರಿ ತಿಪಟೂರು ತಾಲ್ಲೂಕಿನ ಹತ್ಯಾಲು ನರಸಿಂಹ ಸ್ವಾಮಿ ದೇವಾಲಯದ ಬಳಿ ನಡೆದ ಟ್ರಾಕ್ಟರ್ ಅಪಘಾತದಲ್ಲಿ 5ಮಂದಿ ಸಾವನ್ನಪ್ಪಿ, 12ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಮಾದಾಪುರ ಹಳ್ಳಿಯ ಚಿಕ್ಕನಾಯಕನಹಳ್ಳಿಯವರು ಎಂದು ಗುರುತಿಸಲಾಗಿದೆ. ಒಟ್ಟು 20ಮಂದಿ ಟ್ರಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಕಿಬ್ಬಾನಹಳ್ಳಿ ಪೊಲೀಸರ ಪ್ರಕಾರ, ಟ್ರ್ಯಾಕ್ಟರ್ ನಲ್ಲಿದ್ದವರು ಶನಿವಾರ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ಕಳೆದು ಟ್ರಾಕ್ಟರ್ ಪಲ್ಟಿಯಾಗಿದೆ. ಇದರಿಂದ ಐದು ಮಂದಿ ಸಾವನ್ನಪ್ಪಿದ್ದು ಇನ್ನುಳಿದವರು ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ಶಂಕರಣ್ಣ(55) ಶಂಕರಪ್ಪ(60), ಶಿವಲಿಂಗಪ್ಪ(50), ನಾಗರಾಜು(43) ಎಂದು ಗುರುತಿಸಲಾಗಿದೆ ಗಾಯಾಳುಗಳನ್ನು ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

See also  ಕಾಸರಗೋಡು ಹೊಸ ಬಸ್ ನಿಲ್ದಾಣದ ಬಾವಿ ಮುಚ್ಚುವಂತೆ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು