News Kannada
Thursday, December 08 2022

ಕರ್ನಾಟಕ

ರೆಸಾರ್ಟ್‍ನಿಂದ ನಿರ್ಗಮಿಸಿದ ಸಿಎಂ ಕುಮಾರಸ್ವಾಮಿ

Photo Credit :

ರೆಸಾರ್ಟ್‍ನಿಂದ ನಿರ್ಗಮಿಸಿದ ಸಿಎಂ ಕುಮಾರಸ್ವಾಮಿ

ಮಡಿಕೇರಿ: ವಿಶ್ರಾಂತಿಯ ಕಾರಣ ಹೇಳಿ ರೆಸಾರ್ಟ್‍ನಲ್ಲಿ ಎರಡು ದಿನ ತಂಗಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯಿಂದ ತೆರಳಿದ್ದಾರೆ.

ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ನಿರ್ಗಮಿಸಿದ ಕೆಲವು ಗಂಟೆಗಳ ನಂತರ ಸಿಎಂ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಮಂಡ್ಯ ಕಡೆಗೆ ಪ್ರಯಾಣ ಬೆಳಸಿದರು. ಮುಖ್ಯಮಂತ್ರಿಗಳು ಮದ್ದೂರಿನಲ್ಲಿ ಬೀಗರ ಔತಣ ಮುಗಿಸಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಇಂದು ಕೂಡ ಸಿಎಂ ಹೆಚ್‍ಡಿಕೆ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ.

ಸಾ.ರಾ.ಮಹೇಶ್ ಅಸಮಾಧಾನ: ಬಿಜೆಪಿ ಶಾಸಕ ಗೋವಿಂದ ಖಾರಜೋಳ ಅವರು ಸಿಎಂ ವಾಸ್ತವ್ಯದ ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಾ.ರಾ.ಮಹೇಶ್ ಹಿರಿಯ ರಾಜಕಾರಣಿಯಾಗಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದಾಗಿತ್ತು.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇಂದು ರಾಜಕಾರಣಿಗಳನ್ನು ಯಾವ ರೀತಿ ಪ್ರತಿಬಿಂಬಿಸಲಾಗುತ್ತಿದೆ ಎನ್ನುವುದನ್ನು ಗಮನಿಸಬೇಕಾಗಿತ್ತು. ನಾವು ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದುಕೊಂಡ ರೀತಿಗಿಂತ ಉತ್ತಮ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಜೆಡಿಎಸ್ ನಾಯಕರಿಂದಲೇ ಟಿವಿ ಮಾದ್ಯಮಗಳಿಗೆ ಟಿಆರ್‍ಪಿ ಹೆಚ್ಚುತ್ತಿದೆ, ಕೆಲವು ಮಾಧ್ಯಮಗಳಿಗೆ ಜೆಡಿಎಸ್ ನಾಯಕರ ಸುದ್ದಿ ಬಿಟ್ಟರೆ ಬೇರೆ ಇಲ್ಲ, ಪ್ರತಿನಿತ್ಯ ಜೆಡಿಎಸ್‍ನವರ ಸುದ್ದಿ ಬಿಟ್ಟರೆ ಬೇರೆ ಸುದ್ದಿಗಳಿಲ್ಲ. ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ಮುಖಂಡರಿಂದಲೇ ಟಿಆರ್‍ಪಿ ಬರುತ್ತಿದೆ ಎಂದು ಕಾಣುತ್ತಿದೆ. ಅದಕ್ಕೋಸ್ಕರವೇ ಇದೇ ವಿಚಾರವನ್ನು ತೋರಿಸುತ್ತಿದ್ದಾರೆ.
ಕೆಲವು ಮಾದ್ಯಮಗಳು ಮನಸ್ಸಿಗೆ ತೋಚಿದಂತೆ ರೆಸಾರ್ಟ್ ಬಿಲ್ ಹಣವನ್ನು ಹಾಕುತ್ತಿವೆ. ಇಲ್ಲಿ ಒಂದು ರೂಂಗೆ ಡಿಸ್ಕೌಂಟ್ ಕಳೆದು ಕೇವಲ 14 ಸಾವಿರ ಇದೆ.

ಬೇಕಿದ್ದರೆ ಆನ್ ಲೈನ್ ನಲ್ಲಿ ಟಾರಿಫ್ ತೆಗೆದು ನೋಡಿ. ಸುಮ್ಮನೆ ಮನಸ್ಸಿಗೆ ತೋಚಿದಂತೆ ತೋರಿಸಬೇಡಿ ಎಂದು ಸಾ.ರಾ.ಮಹೇಶ್ ಗರಂ ಆದರು.

 

See also  ಕೊಡಗಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು