News Kannada
Sunday, November 27 2022

ಕರ್ನಾಟಕ

ಮಾದಕವಸ್ತು ಮಾರಾಟಗಾರರಿಗೆ ಸಿಂಹಸ್ವಪ್ನ ಗಜ - 1 min read

Photo Credit :

ಮಾದಕವಸ್ತು ಮಾರಾಟಗಾರರಿಗೆ ಸಿಂಹಸ್ವಪ್ನ ಗಜ

ಮೈಸೂರು: ಮೈಸೂರಿನ ಗಜ ಅಂದ್ರೆ ಸಾಕು ಗಾಂಜಾ, ಆಫೀಮುನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಗಡಗಡ ನಡಗುತ್ತಾರೆ. ಇದಕ್ಕೆ ಕಾರಣ ಗಜ. 

ಇಷ್ಟಕ್ಕೂ ಈ ಗಜ ಯಾರಪ್ಪಾ ಎಂಬ ಕುತೂಹಲಕ್ಕೆ ಇಲ್ಲಿದೆ ಗಜನ ಕುರಿತಂತೆ ಒಂದಷ್ಟು ಮಾಹಿತಿ. ಗಜ ಎಂದರೆ ಮೈಸೂರಿನ ಶ್ವಾನದಳದಲ್ಲಿರುವ ಹೀರೋ. ಸುಮಾರು ಹತ್ತು ಶ್ವಾನಗಳ ಪೈಕಿ ಗಜನೂ ಒಂದು. ಇದು ಸದ್ಯ ತನ್ನ ಚಾಕಚಕ್ಯತೆ ಮತ್ತು ಸೂಕ್ಷ್ಮಗ್ರಾಹಿ. ಗಾಂಜಾ ಮತ್ತು ಆಫೀಮು ಕಳ್ಳರಲ್ಲಿ ಭಯಹುಟ್ಟಿಸಬಲ್ಲ ಧೀರ. 

ಎಲ್ಲೆಡೆಯೂ ಶ್ವಾನದಳವಿರುತ್ತದೆ. ಎಲ್ಲದಕ್ಕೂ ತರಬೇತಿ ನೀಡಲಾಗುತ್ತದೆ. ಆದರೆ ತನ್ನದೇ ಆದ ವಿಶೇಷ ಚುರುಕುತನ, ಬುದ್ದಿವಂತಿಕೆಯಿಂದ ಕೆಲವೇ ಕೆಲವು ಶ್ವಾನಗಳು ಗಮನಸೆಳೆಯುತ್ತವೆ. ಅಂತಹ ಶ್ವಾನಗಳಲ್ಲಿ ಗಜ ಒಂದಾಗಿದೆ ಎಂದರೂ ತಪ್ಪಾಗುವುದಿಲ್ಲ. ಎಂಟು ವರ್ಷ ಪ್ರಾಯದ ಈ ಶ್ವಾನ 2011 ಮೇ.4ರಂದು ಜನಿಸಿದೆ. 3 ತಿಂಗಳ ಮರಿಯಿದ್ದಾಗಲೇ ಇದಕ್ಕೆ ಕಠಿಣವಾದ ತರಬೇತಿ ನೀಡಲು ಆರಂಭಿಸಲಾಯಿತು. ಲ್ಯಾಬ್ರಡಾರ್ ಜಾತಿಗೆ ಸೇರಿದ ಗಜ ಕಳೆದ ಏಳೂವರೆ ವರ್ಷಗಳಿಂದ ಶ್ವಾನದಳದಲ್ಲಿ ಕಾರ್ಯನಿರ್ವಹಿಸುತ್ತಿದೆ. 

ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಗಜ ಅಪರಾಧ ಘಟನೆ ನಡೆದ ವೇಳೆ ದುಷ್ಕರ್ಮಿಗಳ ಜಾಡು ಹಿಡಿಯಬಲ್ಲ ಚಾಣಾಕ್ಷಿ. ಅದರಲ್ಲೂ ಗಾಂಜಾ ಆಫೀಮುನಂತಹ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವುದರಲ್ಲಿ ಎತ್ತಿದ ಕೈ. ಇನ್ನೂ ಕ್ರೀಡೆಯಲ್ಲಿಯೂ ಹಿಂದೆ ಬಿದ್ದಿಲ್ಲ. ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನದ ಪದಕ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ರನ್ನರ್ ಅಪ್ ಪದಕ ಮುಡಿಗೇರಿಸಿಕೊಂಡಿದೆ. ಹಲವು ಸ್ಟಂಟ್‍ಗಳನ್ನು ಮಾಡುವಲ್ಲಿಯೂ ಇದು ಹಿಂದೆ ಬಿದ್ದಿಲ್ಲ. 

ಇದು ತರಬೇತುದಾರ ಬಲರಾಮನ್ ಅವರ ಗರಡಿಯಲ್ಲಿ ಬೆಳೆದಿದ್ದು, ಅವರು ಮಾತನ್ನು ಚೆನ್ನಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇದರ ಕಾರ್ಯಕ್ಷಮತೆಯನ್ನು ನೋಡಿಯೇ ನಾರ್ಕೋಟಿಕ್ ಡ್ರಗ್ ಪತ್ತೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರಿನ ಶ್ವಾನದಳಕ್ಕೊಂದು ಗಜ ಹಿರಿಮೆಯಾಗಿದೆ.

See also  ಪೈವಳಿಕ ಗ್ರಾ. ಪಂ. ವಿರುದ್ಧ ಅವಿಶ್ವಾಸ ಗೊತ್ತುವಳಿ: ಆಡಳಿತ ಪಕ್ಷದವರ ಗೈರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು