News Kannada
Friday, December 02 2022

ಕರ್ನಾಟಕ

ಬಂಡೀಪುರ ಸಫಾರಿ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಸಜ್ಜು

Photo Credit :

ಬಂಡೀಪುರ ಸಫಾರಿ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಸಜ್ಜು

ಚಾಮರಾಜನಗರ: ಜೂನ್ 2ರಿಂದ ಬಂಡೀಪುರದಲ್ಲಿ ಈಗ ನಡೆಯುತ್ತಿರುವ ಸಫಾರಿಯನ್ನು ಸ್ಥಳಾಂತರಿಸುತ್ತಿದ್ದು, ನೂತನ ಸಫಾರಿಗೆ ಅರಣ್ಯ ಇಲಾಖೆ ಸಿದ್ಧತಾ ಕಾರ್ಯಗಳನ್ನು ಮಾಡುತ್ತಿದೆ.

ಬಂಡೀಪುರದಲ್ಲಿ 140ಕ್ಕೂ ಹೆಚ್ಚು ಹುಲಿಗಳು.. ಅಸಂಖ್ಯಾತ ಚಿರತೆ, ಜಿಂಕೆ, ಆನೆ ಸೇರಿದಂತೆ ಹಲವಾರು ಪ್ರಾಣಿಗಳಿದ್ದು ಅವುಗಳನ್ನು ನೋಡುವ ಸಲುವಾಗಿಯೇ ಜನ ಸಫಾರಿಗೆ ಬರುತ್ತಿದ್ದಾರೆ. ಇದೀಗ ನೂತನ ಸಫಾರಿ ಆರಂಭವಾದರೆ ಇನ್ನಷ್ಟು ಜನ ಆಗಮಿಸುವ ಸಾಧ್ಯತೆಯಿದೆ.

ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಆರಂಭವಾದ ದಿನದಿಂದ ಬಂಡೀಪುರಕ್ಕೆ ಪ್ರವಾಸಿಗರು ಸಫಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಇದರಿಂದ ಅರಣ್ಯ ಇಲಾಖೆಗೆ ಹೆಚ್ಚಿನ ಆದಾಯವು ಬರುತ್ತಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುವಂತೆ ಕೇಂದ್ರ ಹುಲಿ ಅಧ್ಯಯನ ಸಂಸ್ಥೆ ಗೈಡ್‍ಲೈನ್ ಪ್ರಕಾರ ಕೋರ್ ಜೋನ್‍ನಲ್ಲಿ ವನ್ಯ ಪ್ರಾಣಿಗಳಿಗೆ ಸ್ವಚ್ಛಂದ ವಿಹಾರಕ್ಕೆ ಅಡ್ಡಿಯಾಗದಂತೆ ವಾಹನ ದಟ್ಟಣೆ ಹಾಗೂ ಶಬ್ದಗಳನ್ನು ನಿಯಂತ್ರಣ ಮಾಡಲು ಸೂಚನೆ ನೀಡಿದ್ದರಿಂದ ಬಂಡೀಪುರದಲ್ಲಿದ್ದ ಸಫಾರಿ ಸ್ಥಳವನ್ನು 6 ಕಿಲೋ ಮೀಟರ್ ದೂರದಲ್ಲಿರುವ ಮೇಲುಕಾಮನಹಳ್ಳಿ ಬಳಿ ಸ್ಥಳಾಂತರ ಮಾಡುತ್ತಿರುವುದಾಗಿ ಎಸಿಎಫ್ ರವಿಕುಮಾರ್ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಕೇಂದ್ರ ನಿರ್ಧಾರದಿಂದ ಬಫರ್ ಜೋನ್‍ನಲ್ಲಿ ಸಫಾರಿ ಆರಂಭಿಸಲು ಸಜ್ಜಾಗಿರುವ ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಧಾರದಿಂದ ಮೇಲುಕಾಮನಹಳ್ಳಿ ಬಳಿ ಇರುವ ಬಂಡೀಪುರ ಸ್ವಾಗತ ಕಮಾನಿನ ಬಳಿ ಹೊಸದಾಗಿ ಸಫಾರಿ ಟಿಕೇಟ್ ಕೌಂಟರ್ ಮತ್ತು ಪ್ರವಾಸಿಗರಿಗೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‍ಎಫ್‍ಓ ರವರನ್ನು ತಾತ್ಕಾಲಿಕವಾಗಿ ಉಸ್ತುವಾರಿ ನೋಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಬಂಡೀಪುರದ ಹುಲಿ ಯೋಜನೆಯ ನಿದೇರ್ಶಕ ಬಾಲಚಂದ್ರ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮೇಲುಕಾಮನಹಳ್ಳಿಯಿಂದ ಆರಂಭವಾಗುವ ಸಫಾರಿ ಯಾವ ರೀತಿಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

See also  ಕಾಸರಗೋಡು ಜಿಲ್ಲೆಯಲ್ಲಿ ಇಂದು 9 ಮಂದಿಗೆ ಕೊರೊನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು